ಕೋಲ್ಕತ್ತ: ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿದ್ದ, ಗುಡುಗು ಸಹಿತ ಮಳೆ ಸುರಿಯುತ್ತಿದ್ದ ವೇಳೆ ಇಂಡಿಗೋ ಎ320 ವಿಮಾನಕ್ಕೆ ಸಿಡಿಲು ಬಡಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗರ್ತಲಾಗೆ ತೆರಳುತ್ತಿದ್ದ ವಿಮಾನವು ಏರೋಬ್ರಿಡ್ಜ್ 56ಎಲ್‌ನಲ್ಲಿ ನಿಂತಿದ್ದಾಗ ಮುಂಜಾನೆ 9.30ಕ್ಕೆ ಘಟನೆ ನಡೆದಿದೆ.
ಸಿಡಿಲು ಬಡಿದ ಕಾರಣ ವಿಮಾನದಲ್ಲಿ ವಿದ್ಯುತ್ ಸ್ಥಗಿತಗೊಂಡಿತು. ಘಟನೆ ನಡೆದಾಗ 141 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ವಿಮಾನದಲ್ಲಿದ್ದರು. ಈ ವೇಳೆ ಯಾರಿಗೂ ತೊಂದರೆಯಾಗಿಲ್ಲ ಎಂದರು.
ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಇಂಡಿಗೋ ಸಂಸ್ಥೆಯು, ಬೇರೊಂದು ವಿಮಾನದಲ್ಲಿ ಅವರನ್ನು ಕಳುಹಿಸಿತು.

