ಪೆರ್ಲ: ಅಂಗನವಾಡಿಗೆ ಸೇರ್ಪಡೆಗೊಂಡ ಮಕ್ಕಳ ಪ್ರವೇಶೋತ್ಸವ ಮತ್ತು ಅಂಗನವಾಡಿಯಿಂದ ಬೀಳ್ಕೊಡುವ ಮಕ್ಕಳಿಗೆ ಸಮಾರಂಭ ವಾಣೀನಗರ ಅಂಗನವಾಡಿಯಲ್ಲಿ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಹೂಗುಚ್ಚವನ್ನಿತ್ತು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ ಉದ್ಘಾಟಿಸಿದರು. ರಂಜಿತಾ ಕುತ್ತಾಜೆ ಸಭೆಯ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತೆ ಪೂರ್ಣಿಮಾ ಬೈರಡ್ಕ, ರತೀಶ್ ಬಲಿಪಬಾಂಡಿಲು ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿಯಿಂದ ಬೀಳ್ಕೊಡುವ ಮಕ್ಕಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆಯನ್ನು ನೀಡಲಾಯಿತು. ಅಂಗನವಾಡಿ ಶಿಕ್ಷಕಿ ಕುಸುಮಾ ಸ್ವಾಗತಿಸಿ, ಶೈಲಜಾ ವಾಣೀನಗರ ವಂದಿಸಿದರು.

.jpg)
