HEALTH TIPS

ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ

 ಬೈರೂತ್: ನಬಾತೀಹ್ ನಗರ ಸೇರಿದಂತೆ 20 ಸ್ಥಳಗಳ ನಾಗರಿಕರಿಗೆ ಸ್ಥಳಾಂತರ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ, ಇಸ್ರೇಲ್‌ ಸೇನೆಯು ದಕ್ಷಿಣ ಭಾಗದ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ಲೆಬನಾನ್‌ ಶನಿವಾರ ಆರೋಪಿಸಿದೆ. 


ರಿಹಾನ್, ಸುಜುಡ್ ಸೇರಿ ಹಲವು ಗ್ರಾಮಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ನ್ಯಾಷನಲ್‌ ನ್ಯೂಸ್ ಏಜೆನ್ಸಿ (ಎನ್‌ಎನ್‌ಎ) ವರದಿ ಮಾಡಿದೆ.

'ಜನರು ಮನೆಗಳನ್ನು ತೊರೆದು ಝಹ್ರಾನಿ ನದಿಯ ಉತ್ತರ ಭಾಗಕ್ಕೆ ತೆರಳಬೇಕು. ಹಿಜ್ಬುಲ್ಲಾದ ಪರಿಸರದಲ್ಲಿ ಯಾರೇ ಇದ್ದರೂ ಜೀವಕ್ಕೆ ಕುತ್ತು ತಂದುಕೊಳ್ಳುತ್ತೀರಿ' ಎಂದು ಎಚ್ಚರಿಕೆ ನೀಡಲಾಗಿತ್ತು ಎಂಬುದನ್ನು ಸಾಮಾಜಿಕ ಮಾಧ್ಯಮ 'ಎಕ್ಸ್‌' ಪೋಸ್ಟ್‌ನಲ್ಲಿ ಇಸ್ರೇಲ್‌ ಸೇನೆ ವಕ್ತಾರ ಅವಿಚೆ ಅಡ್ರಾಯಿ ದೃಢಪಡಿಸಿದ್ದಾರೆ.

ಝಹ್ರಾನಿ ನದಿಯ ದಕ್ಷಿಣ ಭಾಗದ ಎಲ್ಲ ಪ್ರದೇಶಗಳನ್ನು 'ಕಾರ್ಯಾಚರಣೆ ವಲಯ' ಎಂದು ಕಳೆದ ತಿಂಗಳು ಘೊಷಿಸಿದ್ದ ಇಸ್ರೇಲ್‌ ಸೇನೆ, ಅಂದಿನಿಂದಲೂ ದಾಳಿ ನಡೆಸುತ್ತಲೇ ಇದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries