ಪಶ್ಚಿಮ ಬಂಗಾಳದ ಖಾರ-ಹುಳಿ ರುಚಿಯ ‘ಝಲ್ ಮುರಿ’ಯನ್ನು ರಾಷ್ಟ್ರೀಯ ಸ್ನ್ಯಾಕ್ಸ್ ಆಗಿ ಘೋಷಿಸುವ ಸಮಯ ಬಂದಿದೆಯೇ? ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಝಲ್ ಮುರಿ ಸ್ನ್ಯಾಕ್ಸ್ ಮೇಲೆ ಆಸಕ್ತಿ ಹೆಚ್ಚಿದಂತೆ ಅನಿಸುತ್ತದೆ.
ಭಾರತದ ಅತಿ ದೀರ್ಘಾವಧಿಯ ಚುನಾಯಿತ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸಂಭ್ರಮಿಸಲು ನಿನ್ನೆ ಬುಧವಾರ ದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಎನ್‌ಡಿಎ ಸಭೆಯಲ್ಲೆ ಝಲ್‌ಮುರಿ ಮತ್ತೊಮ್ಮೆ ವಿಶೇಷ ಆಕರ್ಷಣೆಯಾಯಿತು.
ಆಡಳಿತಾರೂಢ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿ (ಓಆಂ)ಯ ಎಲ್ಲಾ ಮಿತ್ರಪಕ್ಷಗಳ ನಾಯಕರು ಹಾಗೂ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕತ್ವ ಈ ಮಹತ್ವದ ಸಭೆಯಲ್ಲಿ ಭಾಗವಹಿಸಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸ್ವತಃ ಝಲ್‌ಮುರಿ ತಯಾರಿಸಿ ಪ್ರಧಾನಿ ಮೋದಿ ಅವರಿಗೆ ನೀಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

