ಮಂಜೇಶ್ವರ: ನಿಯಂತ್ರಣ ಉಲ್ಲಂಘಿಸಿ ಸಂಚಾರ ನಡೆಸಿದ ಎರಡು ಟಿಪ್ಪರ್ ಲಾರಿಗಳನ್ನು ಮಂಜೇಶ್ವರ ಠಾಣೆ ಪೆÇಲೀಸರು ವಶಪಡಿಸಿಕೊಂಡು ಚಾಲಕರನ್ನು ಬಂಧಿಸಿದ್ದಾರೆ. ವೈವಳಿಕೆ ಕೈಕಂಬ ರಸ್ತೆಯ ಬಾಯಿಕಟ್ಟೆಯಲ್ಲಿ ನಿನ್ನೆ ಬೆಳಿಗ್ಗೆ 9ರಿಂದ 10 ಗಂಟೆ ಮಧ್ಯೆ ಈ ಲಾರಿಗಳನ್ನು ವಶಪಡಿಸಲಾಗಿದೆ. ಲಾರಿಗಳ ಚಾಲಕರಾದ ಬೇಡಗುಡ್ಡೆ ನಿವಾಸಿ ಪ್ರಶಾಂತ್ ಬಿ (35), ಬಂಟ್ವಾಳ ಭಗವತಿ ಕ್ರಾಸ್ ರೋಡ್ ಜಿ.ಆರ್ ಕಾಂಪ್ಲೆಕ್ಸ್ ನಿವಾಸಿ ಈಶ್ವರ (55) ಎಂಬಿವರನ್ನು ಬಂಧಿಸಿ, ಬಳಿಕ ಇವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ಶಾಲಾತರಗತಿ ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 9ರಿಂದ 10ರ ವರೆಗೆ ಹಾಗೂ ಸಂಜೆ 4ರಿಂದ 5ರ ವರೆಗೆ ಟಿಪ್ಪರ್ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿರುವುದಾಗಿ ಮಂಜೇಶ್ವರ ಠಾಣೆ ಎಸ್.ಐ ವೈಷ್ಣವ್ ತಿಳಿಸಿದ್ದಾರೆ.

