ಕಾಸರಗೋಡು: ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳನ್ನು ಪೂರೈಸುತ್ತಿದ್ದ ಯುವಕನನ್ನು ಮೇಲ್ಪರಂಬ ಠಾಣೆಯ ಎಸ್‍ಐ ಪಿ.ಕೆ. ಅಬ್ಬಾಸ್ ನೇತೃತ್ವದ ಪೆÇಲೀಸರ ತಂಡ ಬಂಧಿಸಿದೆ. ಉತ್ತರಪ್ರದೇಶದ ನಿವಾಸಿ ಮೊಹಮ್ಮದ್ ನಸೀರ್ (19) ಬಂಧಿತ. ಕಳನಾಡಿನ 14ರ ಹರೆಯದ ವಿದ್ಯಾರ್ಥಿಗೆ ಮಾದಕಮಾತ್ರೆಗಳನ್ನು ನೀಡುತ್ತಿದ್ದ ವೇಳೆ ಆರೋಪಿಯನ್ನು ಪೆÇಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.
ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಮಾದಕದ್ರವ್ಯ ದಂಧೆಯನ್ನು ಪತ್ತೆಹಚ್ಚಿ ಅದನ್ನು ಬೇರು ಸಹಿತ ಕಿತ್ತು ಹಾಕಲು ರಾಜ್ಯ ಗೃಹ ಇಲಾಖೆ ರಾಜ್ಯಾದ್ಯಂತ ಸೋಮವಾರದಿಂದ ಆರಂಭಿಸಿರುವ 'ತೂಫಾನ್ ನಾರ್ಕೋ ಹಂಟ್ ಆಪರೇಶನ್' ಕಾರ್ಯಾಚರಣೆಯನ್ವಯ ಮೇಲ್ಪರಂಬ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ವಿದ್ಯಾರ್ಥಿಗೆ ನೀಡಿದ ಮಾದಕ ಮಾತ್ರೆಗಳು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಹೀಗೆ ಮೂರು ಮಾತ್ರೆಗಳನ್ನು ಆತ ವಿದ್ಯಾರ್ಥಿಗೆ ನೀಡಿದ್ದಾನೆ. ಆರೋಪಿಯ ದೇಹ ತಪಾಸಣೆ ನಡೆಸಿದಾಗ ಆತನ ಪ್ಯಾಂಟ್‍ನ ಜೇಬಿನಿಂದ ಇಂತಹ ಎಂಟು ಸ್ಲೀಪ್ ಮಾತ್ರೆಗಳು ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾನಸಿಕ ಅಸೌಖ್ಯದಿಂದ ಬಳಲುತ್ತಿರುವವರಿಗೆ ವೈದ್ಯರುಗಳ ನಿರ್ದೇಶ ಪ್ರಕಾರ ನೀಡಲಾಗುವ ಮಾತ್ರೆಗಳು ಇದಾಗಿದೆಯೆಂದು ಪೆÇಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯ ವಿರುದ್ಧ ಜುವೈನಲ್ ಜಸ್ಟಿಸ್ ಕೇರ್ ಆ್ಯಂಡ್ ಪೆÇ್ರಟೆಕ್ಷನ್ ಆಫ್ ಚಿಲ್ಡ್ರನ್ಸ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿದ ನಂತರ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(2)ದ ಆದೇಶ ಪ್ರಕಾರ ನ್ಯಾಯಾಂಗ ಬಂಧನ ದಲ್ಲಿರಿಸಲಾಗಿದೆ. ಮಾದಕ ಮಾತ್ರೆ ಪಡೆದ ವಿದ್ಯಾರ್ಥಿಯ ಹೆತ್ತವರನ್ನು ಪೆÇಲೀಸರು ಠಾಣೆಗೆ ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

