ಕಾಸರಗೋಡು: ಪೋಲೀಸ್ ಸೋಗಿನಲ್ಲಿ ಚಿನ್ನದಂಗಡಿಗೆ ಆಗಮಿಸಿ, 2.65 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಗೋವಾದಿಂದ ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. Éೀಕಲ ಡಿವೈಎಸ್ಪಿ ಎಂ.ಪಿ. ಆಜಾದ್‍ರ ಮೇಲ್ನೋಟದಲ್ಲಿ ಬೇಕಲ ಠಾಣಾಧಿಕಾರಿ ಶಿವಂ, ಇನ್‍ಸ್ಪೆಕ್ಟರ್ ಎಂ.ಕೆ. ಅನಿಲ್ ಕುಮಾರ್, ಎಸ್‍ಐ ಅಖಿಲ್ ಸೆಬಾಸ್ಟಿನ್ ನೇತೃತ್ವದ ಪೆÇಲೀಸರ ತಂಡ ಕಾರ್ಯಚರಣೆ ನಡೆಸಿದೆ. ತಿರುವನಂತಪುರ ನೆರಿಕ್ಕಲ್ ಮೂಕನಂ ನಿವಾಸಿ ಮನು ಬಂಧಿತ.
ಮೇ 26ರಂದು ಉದುಮ ರೈಲ್ವೇ ಗೇಟ್ ಸಮೀಪದ ಚಿನ್ನದಂಗಡಿಯೊಂದರಿಂದ ಎರಡು ಬಾರಿಯಾಗಿ ಒಟ್ಟು 12.600 ಗ್ರಾಂ ಚಿನ್ನದೊಡವೆಯನ್ನು ದೋಚಿ ಪರಾರಿಯಾಗಿದ್ದನು. ಈ ಬಗ್ಗೆ ಚಿನ್ನದಂಗಡಿ ಮಾಲಿಕ ಕೆ. ಗಣೇಶನ್ ಬೇಕಲ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು. ಪೆÇಲೀಸರು ಸಿ.ಸಿ. ಟಿವಿ ದೃಶ್ಯ ಪರಿಶೀಲಿಸಿದಾಗ ವಂಚನೆ ನಡೆಸಿರುವ ವ್ಯಕ್ತಿ ತಿರುವನಂತಪುರ ನಿವಾಸಿ ಮನು ಎಂಬುದಾಗಿ ತಿಳಿದು ಬಂದಿತ್ತು.

