ಮಂಜೇಶ್ವರ: ಕಡಂಬಾರು ಸರ್ಕಾರಿ ಪ್ರೌಢಶಾಲೆಯಲ್ಲಿ ತೆರವಾಗಿರುವ ಅಧ್ಯಾಪಕ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗೆ ಸಂದರ್ಶನ ಜೂ. 4ರಂದು ನಡೆಯಲಿರುವುದು. ಅರ್ಹ ಉದ್ಯೋಗಾರ್ಥಿಗಳು ತಮ್ಮ ಅಸಲು ದಾಖಲೆಗಳೊಂದಿಗೆ ಅಂದು ಬೆಳಗ್ಗೆ 11ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಚ್‍ಎಸ್‍ಟಿ ಇಂಗ್ಲಿಷ್-1, ಎಚ್‍ಎಸ್‍ಟಿ ಫಿಸಿಕಲ್ ಎಜುಕೇಶನ್-1 ಹಾಗೂ ಎಲ್‍ಪಿಎಸ್‍ಟಿ ಪೂರ್ಣಕಾಲಿಕ ಅರಬಿಕ್ ಶಿಕ್ಷಕ-1 ಹುದ್ದೆಗೆ ಸಂದರ್ಶನ ನಡೆಯಲಿರುವುದು.


