ಪೆರ್ಲ: ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹಿರಿಯಪ್ರಾಥಮಿಕ ಶಾಲಾ ಪ್ರವೇಶೋತ್ಸವ, ನೂತನವಾಗಿ ಆರಂಭಗೊಂಡ ಎಲ್‍ಕೆಜಿ ತರಗತಿಯ ಉದ್ಘಾಟನೆ ನೆರವೇರಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಶರತ್ಚಂದ್ರ ಶೆಟ್ಟಿ ಸಮಾರಂಭ ಉದ್ಘಾಟಿಸಿದರು.
ಶಾಲಾ ಪ್ರಬಂಧಕ ವೇಣುಗೋಪಾಲ್ ಸಪರ್ಂಗಳ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಐತಪ್ಪ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸಾಜು ಟಿ.ವಿ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ಅಡಿಗ ಬಜಕೂಡ್ಲು ವಂದಿಸಿದರು.

