ಕಾಸರಗೋಡು: 'ಆಪರೇಷನ್ ತೂಫಾನಿನ ನಾರ್ಕೋ ಹಂಟ್' ಕಾರ್ಯಾಚರಣೆಯನ್ವಯ ಮೈಲಾಟಿ 220 ಕೆವಿ ವಿದ್ಯುತ್ ಸಬ್ ಸ್ಟೇಷನ್ ವಠಾರದ ರಾಷ್ಟ್ರೀಯ ಹೆದ್ದಾರಿ ಬದಿಯ ಕಟ್ಟಡವೊಂದಕ್ಕೆ ಮೇಲ್ಪರಂಬ ಠಾಣೆ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳ ನಿರ್ಮಾಣ ಘಟಕವನ್ನು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಮೀಪುಗುರಿ ನಿವಾಸಿ, ಸಿ.ಎಂ. ಜಾಫರ್ (32) ಮತ್ತು ಬದಿಯಡ್ಕ ನಿವಾಸಿ ಮೊಹಮ್ಮದ್ ಹಾರೀಸ್ (29) ಎಂಬವರನ್ನು ಬಂಧಿಸಿದ್ದಾರೆ. ಮೇಲ್ಪರಂಬ ಠಾಣೆಯ ಇನ್ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ಕಾರ್ಯಾಚರಣೆ ನಡೆಸಿದೆ. ಅನಧಿಕೃತ ಪಾನ್ ಮಸಾಲ ನಿರ್ಮಾಣ ಘಟಕದಿಂದ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡುವ ಯಂತ್ರ, ಉತ್ಪಾದನಾ ಘಟಕಗಳು, ಕಂಪ್ರೆಸರ್ ಯಂತ್ರ ಹಾಗೂ 15,000 ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳನ್ನು 14 ಗೋಣಿ ಚೀಲಗಳಲ್ಲಾಗಿ ತುಂಬಿಸಿಡಲಾಗಿತ್ತೆಂದು ಪೆÇಲೀಸರು ತಿಳಿಸಿದ್ದಾರೆ. ಇಲ್ಲಿ ಅನಧಿಕೃತವಾಗಿ ಪಾನ್ ಮಸಾಲ ತಯಾರಿ ಘಟಕ ಕಾರ್ಯವೆಸಗತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯನ್ವಯ ದಾಳಿ ಆಯೋಜಿಸಲಾಗಿತ್ತು. ಶುಚೀಕರಣ ಉತ್ಪನ್ನ ತಯಾರಿ ಘಟಕ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಇದರ ಮರೆಯಲ್ಲಿ ಅನಧಿಕೃತ ಅನಧಿಕೃತ ತಂಬಾಕು ಉತ್ಪಾದನಾ ಘಟಕ ಕಾರ್ಯವೆಸಗುತ್ತಿತ್ತು ಎಂದು ಪೆÇಲೀಸರು ಹೇಳಿದ್ದಾರೆ.


