HEALTH TIPS

ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ವಾಚನಾ ವಾರಾಚರಣೆ, ಸಂವಾದ ಕಾರ್ಯಕ್ರಮ

ಕಾಸರಗೋಡು: ಪುಸ್ತಕಗಳ ಓದು ಬೌದ್ಧಿಕ ವಿಕಾಸಕ್ಕೆ ಹಾದಿಮಾಡಿಕೊಡುವುದರ ಜತೆಗೆ ಯಶಸ್ವಿ ಜೀವನದ ಹಾದಿ ತೆರೆಯಲು ಸಹಕಾರಿ ಎಂದು ನುಳ್ಳಿಪ್ಪಾಡಿಯ ಕನ್ನಡಭವನ ಗ್ರಂಥಾಲಯ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ. 


ಅವರು ವಾಚನಾ ವಾರಾಚರಣೆ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಗರದ ಭಾಲಭವನ ವಿದ್ಯಾ ಕೇಂದ್ರದ ಅಧ್ಯಾಪಕ ವಿದ್ಯಾರ್ಥಿಗಳ ಅರ್ಧ ದಿನ ಗ್ರಂಥಾಲಯ ಸಂದರ್ಶನ ಹಾಗೂ "ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ "ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ ಭವನ್ ವಿದ್ಯಾ ಸಂಸ್ಥೆಯ ಶಿಕ್ಷಣ ಸಲಹೆಗಾರ ಹಾಗೂ ಕನ್ನಡ ಭವನದ ನಿರ್ದೇಶಕ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಪುಸ್ತಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಕನ್ನಡ ಭವನ ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಜನಾ ಗುರು, ಕಲಾವಿದ  ಜಯಾನಂದ ಕುಮಾರ್ ಹೊಸದುರ್ಗ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ ವಿದ್ಯಾರ್ಥಿಗಳಿಗೆ ವರದಿ ತಯಾರಿಕೆ ಬಗ್ಗೆ ತರಗತಿ ನಡೆಸಿದರು.

ಬಾಲ ಭವನ್ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್ ಮತ್ತು ಅದ್ಯಾಪಿಕೆ ದೀಪ್ತಿ ಅವರನ್ನು ಕನ್ನಡ ಭವನ ವತಿಯಿಂದ ಗೌರವಿಸಲಾಯಿತು.  ಈ ಸಂದರ್ಭ ಶಾಲಾ ಗ್ರಂಥಾಲಯಕ್ಕೆ ಕನ್ನಡಭವನ ಗ್ರಂಥಾಲಯ ಸಮಿತಿವತಿಯಿಂದ ಪುಸ್ತಕ ಕೊಡುಗೆಯಾಗಿ  ನೀಡಲಾಯಿತು. ವಿದ್ಯಾರ್ಥಿಗಳಿಂದ ಅನಿಸಿಕೆ, ಗಾಯನ, ಗ್ರಂಥಾಲಯಗಳ ರೂವಾರಿ ಪಿ. ಎನ್ ಪಣಿಕ್ಕರ್ ಬಗ್ಗೆ ಭಾಷಣ. ವಾಚನ ವಾರಾಚಾರಣೆ ಬಗ್ಗೆ ಚರ್ಚೆ, ಸಂವಾದ ನಡೆಯಿತು.

ಗ್ರಂಥಾಲಯ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೆಸಿಎನ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries