HEALTH TIPS

ಮೆಸ್ಸಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಕ್ರಮ: ವಿಚಾರಣೆಗೆ ಹಾಜರಾದ ಬಿಸ್ವಾಸ್‌

ಕೋಲ್ಕತ್ತ: ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಕ್ರಮ ನಡೆದಿತ್ತು ಎಂಬ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಅರೂಪ್‌ ಬಿಸ್ವಾಸ್‌ ಅವರು ಸೋಮವಾರ ಎರಡನೇ ಬಾರಿಗೆ ವಿಧಾನನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಡಿಸೆಂಬರ್‌ 13ರಂದು ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಟಿಕೆಟ್‌ಗಳ ಅಕ್ರಮ ಮಾರಾಟ, ಸುಲಿಗೆ, ವಂಚನೆ ಮತ್ತು ಕ್ರಿಮಿನಲ್‌ ಬೆದರಿಕೆ ಆರೋಪದ ಮೇಲೆ ಬಿಸ್ವಾಸ್‌ ಅವರ ವಿರುದ್ಧ ಕಾರ್ಯಕ್ರಮದ ಆಯೋಜಕ ಶತಾದ್ರು ದತ್ತಾ ಅವರ ದೂರು ನೀಡಿದ್ದು, ಮೇ 17ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು.

'ಕಾರ್ಯಕ್ರಮದ ಸುಮಾರು 22,000 ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗಿವೆ. ಕ್ರೀಡಾ ಸಚಿವರಾಗಿದ್ದ ಬಿಸ್ವಾಸ್‌ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾರ್ಯಕ್ರಮದ ಮೇಲೆ ಅನಗತ್ಯ ಪ್ರಭಾವ ಬೀರಿದ್ದಾರೆ' ಎಂದು ದತ್ತಾ ಅವರು ಆರೋಪಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳು ಮೆಸ್ಸಿಯವರನ್ನು ಸುತ್ತುವರೆದಿದ್ದರಿಂದ ಟಿಕೆಟ್‌ಗಾಗಿ ಸಾವಿರಾರು ರೂಪಾಯಿಗಳನ್ನು ಪಾವತಿಸಿದರೂ ನೋಡಲು ಸಾಧ್ಯವಾಗಲಿಲ್ಲ ಎಂದು ಪ್ರೇಕ್ಷಕರು ಕ್ರೀಡಾಂಗಣದ ಕೆಲ ಭಾಗಗಳನ್ನು ಧ್ವಂಸಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶತಾದ್ರು ದತ್ತಾ ಅವರನ್ನು ಬಂಧಿಸಲಾಗಿತ್ತು. 'ಕಾರ್ಯಕ್ರಮದ ವೈಫಲ್ಯ ಮತ್ತು ಆಯೋಜಕರು ಅನುಭವಿಸಿದ ನಷ್ಟಕ್ಕೆ ಬಿಸ್ವಾಸ್‌ ಅವರು ಕಾರಣ' ಎಂದು ಅವರು ಜಾಮೀನು ಪಡೆದ ಬಳಿಕ ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries