HEALTH TIPS

ಪೆರ್ಲದಲ್ಲಿ ಧ.ಗ್ರಾ.ಯೋಜನೆಯಿಂದ ಪರಿಸರ ಜಾಗೃತಿ ಮತ್ತು ಗಿಡ ನಾಟಿ ವನಮಹೋತ್ಸವ

ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಜೇಶ್ವರ ತಾಲೂಕು ಪೆರ್ಲ ವಲಯದ ವತಿಯಿಂದ ಪರಿಸರ ಜಾಗೃತಿ ಮತ್ತು ಗಿಡ ನಾಟಿ ವನಮಹೋತ್ಸವ ಕಾರ್ಯಕ್ರಮ ಶ್ರೀ ಶಾರದಾ ಮರಾಠಿ ಬೋರ್ಡಿಂಗ್ ಹಾಲ್ ನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿದರು.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ಮೇಲ್ವಿಚಾರಕಿ  ಜಯಶ್ರೀ, ಶ್ರೀ ಶಾರದಾ ಮರಾಠಿ ಚಾರಿಟೇಬಲ್ ಟ್ರಸ್ಟ್ ನ  ಗೌರವ ಅಧ್ಯಕ್ಷ ಡಾ.ಬಿ.ಜಿ. ನಾಯ್ಕ ಮತ್ತು ಶ್ರೀ ಶಾರದಾ ಮರಾಠಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ನಾರಾಯಣ ನಾಯ್ಕ, ಶ್ರೀ ಶಾರದಾ ಮರಾಠಿ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಂಜೇಶ್ವರ ತಾಲೂಕು ಮಾಸ್ಟರ್ ಸುರೇಂದ್ರ, ಕಾಟುಕುಕ್ಕೆ ಒಕ್ಕೂಟದ ಅಧ್ಯಕ್ಷೆ ರೇವತಿ, ಬೇಂಗಪದವು ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಬೇಂಗಪದವ,Å ಒಕ್ಕೂಟದ ಸೇವಾ ಪ್ರತಿನಿಧಿ ಲತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಮರಾಠಿ ಮಹಿಳಾ ವೇದಿಕೆ ಸದಸ್ಯರು, ಶ್ರೀ ಶಾರದಾ ಮರಾಠಿ ಚಾರಿಟೇಬಲ್ ಟ್ರಸ್ಟನ ಸದಸ್ಯರು, ಶ್ರೀ ಶಾರದಾ ಮರಾಠಿ ಸಮಾಜ ಸೇವಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ಶೌರ್ಯ ಘಟಕದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. 

ಶ್ರೀ ಶಾರದಾ ಮರಾಠಿ ಮಹಿಳಾ ವೇದಿಕೆ ಸದಸ್ಯೆ  ಗೋಪಿ ಕೃಷ್ಣ ಸ್ವಾಗತಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ಒಕ್ಕೂಟದ ಸೇವಾ ಪ್ರತಿನಿಧಿ ರೇಖಾ ಜ್ಯೋತಿ ವಂದಿಸಿದರು. ಶ್ರೀ ಶಾರದಾ ಮರಾಠಿ ಮಹಿಳಾ ವೇದಿಕೆ ಸದಸ್ಯೆ ಲಕ್ಷ್ಮಿ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries