HEALTH TIPS

ಇರಾನ್ ಭರವಸೆ ಸುಳ್ಳಾಗಿದ್ದರೆ, ಮಾತುಕತೆ ಈಗಲೇ ಕೊನೆಗೊಳ್ಳುತ್ತದೆ: ಟ್ರಂಪ್

 ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಯಾವುದೇ ಸುಂಕ ವಸೂಲಿ ಮಾಡುತ್ತಿಲ್ಲ ಎಂದು ಇರಾನ್ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ. 


'ಜಲಮಾರ್ಗವನ್ನು ಬಳಸುವ ಹಡಗುಗಳ ಮೇಲೆ ಇರಾನ್ ಶುಲ್ಕ ವಿಧಿಸಲು ಮುಂದಾಗಿದೆ ಎಂಬ ವರದಿಗಳು ಸುಳ್ಳು.

ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಂದ ಯಾವುದೇ ರೀತಿಯ ಸುಂಕ, ವಿಮಾ ವೆಚ್ಚ ಅಥವಾ ಇನ್ಯಾವುದೇ ಶುಲ್ಕವನ್ನು ಬಯಸುತ್ತಿಲ್ಲ ಮತ್ತು ಸ್ವೀಕರಿಸುತ್ತಿಲ್ಲ ಎಂದು ಇರಾನ್ ನಮಗೆ ಮಾಹಿತಿ ನೀಡಿದೆ' ಎಂದು ಟ್ರಂಪ್ ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್' ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

'ಒಂದು ವೇಳೆ ಇರಾನ್ ಭರವಸೆ ಸುಳ್ಳಾಗಿದ್ದರೆ, ಶಾಂತಿ ಒಪ್ಪಂದ ಕುರಿತಾದ ಮಾತುಕತೆ ತಕ್ಷಣವೇ ಕೊನೆಗೊಳ್ಳುತ್ತದೆ' ಎಂದು ಎಚ್ಚರಿಸಿದ್ದಾರೆ.

ಉಭಯ ದೇಶಗಳು ಸೋಮವಾರ ಸ್ವಿಟ್ಜರ್ಲೆಂಡ್‌ನಲ್ಲಿ ಮೊದಲ ಸುತ್ತಿನ ಮಾತುಕತೆಗಳನ್ನು ಮುಕ್ತಾಯಗೊಳಿಸಿವೆ. ಆದರೆ, ಕಳೆದ ವಾರ ಸಹಿ ಹಾಕಲಾದ ಒಪ್ಪಂದದ ಪ್ರಮುಖ ಅಂಶಗಳ ಬಗ್ಗೆ ಎರಡೂ ದೇಶಗಳು ಅಂದಿನಿಂದ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿವೆ.

ಇರಾನ್‌ಗೆ ಆರ್ಥಿಕ ನೆರವು ನೀಡುವುದು, ಹೊರ್ಮುಜ್ ಜಲಸಂಧಿ ಮೇಲಿನ ನಿಯಂತ್ರಣ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯದ ಸಂಗತಿಗಳಾಗಿವೆ.

ಈ ಒಪ್ಪಂದದ ವಿಚಾರವಾಗಿ ಟ್ರಂಪ್ ಅವರು ತಮ್ಮದೇ ರಿಪಬ್ಲಿಕನ್ ಪಕ್ಷದ ಸದಸ್ಯರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries