ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ(ಪಿಆರ್‍ಡಿ)ಯ ಕಣ್ಣೂರು ಪ್ರಾದೇಶಿಕ ಉಪ ನಿರ್ದೇಶಕರಾಗಿ ಎ. ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಫೀಲ್ಡ್ ಪಬ್ಲಿಸಿಟಿ-ಕಲ್ಚರಲ್ ಅಫೇರ್ಸ್ ಉಪ ನಿರ್ದೇಶಕ, ತಿರುವನಂತಪುರ, ಆಲಪ್ಪುಳ, ಕೊಟ್ಟಾಯಂ ಜಿಲ್ಲಾ ಮಾಹಿತಿ ಅಧಿಕಾರಿ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಪಿಆರ್‍ಒ ಮತ್ತು ವಿವಿಧ ಜಿಲ್ಲೆಗಳಲ್ಲಿ ಸಿಎಂ ವಿಥ್ ಮಿ ಸಿಟಿಜನ್ ಕನೆಕ್ಟ್ ಸೆಂಟರ್‍ನ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಪ್ರಸಕ್ತ ವಾರ್ತಾ-ಮಾಹಿತಿಮತ್ತು ಸಂಪರ್ಕ ಇಲಾಖೆಯ ಕಾಸರಗೋಡು, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.


