HEALTH TIPS

'ಪ್ರಿಯದರ್ಶಿನಿ' ಉಚಿತ ಪ್ರಯಾಣ ಯೋಜನೆ: ಕಾಸರಗೋಡಲ್ಲಿ ಚಾಲನೆ

ಕಾಸರಗೋಡು: ಐಕ್ಯರಂಗ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಐಕ್ಯರಂಗ ಸರ್ಕರದ ಮಹತ್ವದ ಯೋಜನೆಗಳಲ್ಲೊಂದಾಗಿರುವ ಕೆಎಸ್‍ಆರ್‍ಟಿಸಿಯ ಆರ್ಡಿನರಿ ಬಸ್‍ಗಳಲ್ಲಿ ಪ್ರಿಯದರ್ಶಿನಿ ನಾಮಧೇಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ರಾಜ್ಯಾದ್ಯಂತ ಅದ್ದೂರಿಯ ಚಾಲನೆ ನೀಡಲಾಯಿತು. 


ತಿರುವನಂತಪುರದ ತಂಬಾನೂರು ಟರ್ಮಿನಲ್‍ನಲ್ಲಿ ಸೋಮವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಬ್ಬರು ಮಹಿಳೆಯರಿಗೆ ಉಚಿತ ಪ್ರಯಾಣದ ಮೊದಲ ಜೀರೋ ಟಿಕೆಟ್ ನೀಡುವ ಮೂಲಕ ಈ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ.ಪಿ. ಜೋನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಂಬಾನೂರಿನಿಂದ ನೇಮಂ ವರೆಗೆ ಉಚಿತ ಸೇವೆ ಆರಂಭಿಸಿದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ತಮ್ಮ ಪ್ರಯಾಣ ನಡೆಸಿದರು.    ಪಿಎಸ್‍ಸಿ ಮೂಲಕ ಮಹಿಳಾ ಚಾಲಕಿಯಾಗಿ ಮೊದಲ ಬಾರಿಗೆ ನೇಮಕಾತಿ ಲಭಿಸಿದ ಪೆರುಂಬಾವೂರು ಡಿಪೆÇೀದ ವಿ.ಸಿ. ಶೀಲಾ ಅವರು ಪ್ರಿಯದರ್ಶಿನಿ ಯೋಜನೆಯ ಮೊದಲ ಸೇವೆಯ ಸಾರಥ್ಯ ವಹಿಸಿದ್ದುದು ವಿಶೇಷತೆಯಾಗಿತ್ತು.  ಜಯ ಕುಮಾರಿ ಈ ಬಸ್‍ಸಿನ ನಿರ್ವಾಹಕಿಯಘಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಿತು. ಕಾಸರಗೋಡು ಡಿಪೋದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಹಸಿರುನಿಶಾನಿ ತೋರಿಸುವ ಮೂಲಕ ಯೋಜನೆಗೆಚಾಲನೆ ನೀಡಿದರು. ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ಡಿಪೆÇೀದ 75ಬಸ್ ಸೇರಿದಂತೆ ಒಟ್ಟು 135 ಆರ್ಡಿನರಿ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಸೋಮವಾರದಿಂದ ಆರಂಭಗೊಂಡಿದೆ. ಕಾಸರಗೋಡು ಡಿಪೋದಿಂದ ಸೇವೆ ಸಲ್ಲಿಸುತ್ತಿರುವ ಅಂತಾರಾಜ್ಯ ಸಂಚಾರದ ಬಸ್‍ಗಳಲ್ಲೂ ಉಚಿತ ಪ್ರಯಾಣ ಯೋಜನೆ ಲಭ್ಯವಾಗಿರುವುದು ಬಹುತೇಕ ಮಹಿಳೆಯರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿನ ಕೆಎಸ್ಸಾರ್ಟಿಸಿ ಬಸ್‍ಗಳು ಸೋಮವಾರ ಪ್ರಯಾಣಿಕರಿಂದ ತುಂಬಿಕೊಂಡಿತ್ತು. ಕಾಸರಗೋಡು ಡಿಪೋದಿಂದ ಅಂತಾರಾಜ್ಯ ಸಂಚಾರದ ಬಸ್‍ಗಳಲ್ಲೂ ಉಚಿತ ಸೇವೆ ಲಬ್ಯವಾಗಿಸಲಾಗಿತ್ತು. ಅಂತಾರಾಜ್ಯ ಸಂಚಾರದ ಕಾಸರಗೋಡು-ಪುತ್ತೂರು ಮಧ್ಯೆ ಸಂಚರಿಸುವ ಬಸ್‍ಗೆ ಐಕ್ಯರಂಗ ವತಿಯಿಂದ ಪೆರ್ಲದಲ್ಲಿ ಸ್ವಾಗತ ನೀಡಲಾಯಿತು. ಬಸ್ಸಿಗೆ ಬೃಹತ್ ಹಾರಾರ್ಪಣೆ ಮಾಡುವ ಮೂಲಕ ಆಹ್ಲಾದ ವ್ಯಕ್ತಪಡಿಸಿದರು.

ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕನಿಷ್ಠ ಸಂಖ್ಯೆಯ ಆರ್ಡಿನರಿ ಬಸ್‍ಗಳಿದ್ದು, ಬಹುತೇಕ ಬಸ್‍ಗಳು ಅಂತಾರಾಜ್ಯ ಸಂಚಾರ ನಡೆಸುತ್ತಿರುವುದರಿಂದ ಈ ಬಸ್‍ಗಳಲ್ಲೂ ಮಹಿಳೆಯರಿಗೆ ಉಚಿತ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕ ಎ.ಕೆ.ಎಂ ಅಶ್ರಫ್ ಸರ್ಕಾರಕ್ಕೆ ಒತ್ತಡ ಹೇರಿದ್ದರು. 

ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ ಒಟ್ಟಾರೆಯಾಗಿ 3125 ಆರ್ಡಿನರಿ ಬಸ್‍ಗಳಲ್ಲಿ ಇದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಸೋಮವಾರದಿಂದ ಜಾರಿಗೊಂಡಿದೆ.  ಈ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೂ ಝೀರೋ ಮೊತ್ತದ ಟಿಕೆಟ್ ನೀಡಲಾಗುತ್ತದೆ.  ಹೀಗೆ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಜತೆ 5ರಿಂದ 11ರ ಮಧ್ಯೆ ಪ್ರಾಯದ ಗಂಡು ಮಕ್ಕಳಿದ್ದರೆ ಅವರಿಗೆ ಅರ್ಧ ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ. ಉಚಿತ ಸೇವೆ ನಡೆಸುತ್ತಿರುವ ಎಲ್ಲಾ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಪ್ರಿಯದರ್ಶಿನಿ ಎಂಬ ಲೇಬಲ್‍ಗಳನ್ನು ಅಳವಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries