ಕಾಸರಗೋಡು: ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆ ಮಹಿಳಾ ಸ್ವಾವಲಂಬನೆಗೆ ಹಾದಿಮಾಡಿಕೊಡಲಿದ್ದು, ದೇಶದ ಪ್ರಗತಿಗೆ ಹೊಸ ನಾಂದಿ ಹಾಡಲಿರುವುದಾಗಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ತಿಳಿಸಿದರು. ಅವರು ಪ್ರಿಯದರ್ಶಿನಿ ಉಚಿತ ಪ್ರವಾಸಕ್ಕೆ ಸಂಬಂಧಿಸಿದಂತೆ, ಕೇರಳ ಎನ್‍ಜಿಒ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೆÇೀದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಿಯದರ್ಶಿನಿ ಯೋಜನೆ ರಾಜ್ಯ ಸರ್ಕಾರದ ಒಂದು ದೃಢ ಹೆಜ್ಜೆಯಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಹಿಳೆಯರು ಮತ್ತು ಟ್ರಾನ್ಸ್‍ಜೆಂಡರ್ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಲಿರುವುದಾಗಿ ತಿಳಿಸಿದರು.
ಕೇರಳ ಎನ್‍ಜಿಒ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಸದಸ್ಯೆ ವತ್ಸಲಾ ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ¥ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ ಮುಖ್ಯ ಭಾಷಣ ಮಾಡಿದರು. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಉಷಾ ಅರ್ಜುನನ್, ಸಂಘದ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಣಂ, ರಾಜ್ಯ ಕಾರ್ಯದರ್ಶಿ ಸದಸ್ಯ ಕೆ.ಸಿ. ಸುಜಿತ್ ಕುಮಾರ್, ಜಿಲ್ಲಾಧ್ಯಕ್ಷ ಟಿ ಶಶಿ ಮೊದಲಾದವರು ಉಪಸ್ಥಿತರಿದ್ದರು.

