ಕಾಸರಗೋಡು : ಭಾರತ ಜನಗಣತಿ 2027 ರ ಅಂಗವಾಗಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಮಾಹಿತಿ ಕಚೇರಿ ಜಂಟಿಯಾಗಿ ಕಾಸರಗೋಡು ಜಿಲ್ಲೆಯ ಸರ್ಕಾರಿ ನೌಕರರಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾನಗರ ಸಿವಿಲ್‍ಸ್ಟೇಶನ್‍ನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು. ಎಡಿಎಂ ಕೆ.ವಿ. ಶ್ರುತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ವಿವಿಧ ಕಚೇರಿಗಳ ನೌಕರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾಸರಗೋಡು ಆರ್‍ಡಿಒ ಕಚೇರಿಯ ಗುಮಾಸ್ತ ಟಿ.ವಿ. ವೃಂದಾ ಉಪಸ್ಥಿತರಿದ್ದರು. ಮೊದಲ ಸ್ಥಾನವನ್ನು ಕಲೆಕ್ಟರೇಟ್ ಕಂದಾಯ ಇಲಾಖೆಯ ಕಚೇರಿ ಸಹಾಯಕಿ ಟಿ.ವಿ. ಬೀನಾ ಗೆದ್ದುಕೊಂರೆ, ಎರಡನೇ ಸ್ಥಾನವನ್ನು ರಾಜ್‍ಕುಮಾರ್ ಪಡೆದುಕೊಂಡರು. ಜನಗಣತಿ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಾದ ಡಾ. ಪಿ.ವಿ. ಜಿಶಾ ರಸಪ್ರಶ್ನೆ ನೇತೃತ್ವ ವಹಿಸಿದ್ದರು. ವಿಜೇತರಿಗೆ ಜಿಲ್ಲಾಧಿಕಾರಿ ಬಹುಮಾನ ವಿತರಿಸಿದರು.
ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ, ಸಹಾಯಕ ಮಾಹಿತಿ ಅಧಿಕಾರಿ ಎಸ್. ಚಿಲಂಕಾ, ಜಿಲ್ಲಾಧಿಕಾರಿಕಚೇರಿಯ ಜನಗಣತಿಯ ಉಸ್ತುವಾರಿ ಅಧಿಕಾರಿಗಳು ಮತ್ತು ಇಲಾಖೆ ನೌಕರರು ಭಾಗವಹಿಸಿದ್ದರು.



