HEALTH TIPS

'El Nino' ಭೂಮಿಯನ್ನು ಕಾದ ಕೆಂಡವಾಗಿಸಲಿದೆ: ಹವಾಮಾನ ತಜ್ಞರ ಎಚ್ಚರಿಕೆ

ವಾಶಿಂಗ್ಟನ್: ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಬೃಹತ್ ಎನ್ನಲಾದ 'ಎಲ್‌ನಿನೋ' ಪ್ರಾಕೃತಿಕ ವಿದ್ಯಮಾನ ರೂಪುಗೊಳ್ಳುತ್ತಿದ್ದು, ಅದು ಭೂಮಿಯನ್ನು ಕಾದ ಕೆಂಡವಾಗಿಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಜಾಗತಿಕವಾಗಿ ಸಹಸ್ರಾರು ಕೋಟಿ ಡಾಲರ್ ನಷ್ಟವನ್ನು ಉಂಟು ಮಾಡಿದಂತಹ 1997ರ ಎಲ್‌ನಿನೋಗಿಂತಲೂ, ಈ ಸಲದ 'ಸೂಪರ್ ಎಲ್‌ನಿನೋ ' ಗಂಭೀರ ಸ್ವರೂಪದ್ದಾಗಿರುವುದೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮತ್ತಿತರ ಪಳೆಯುಳಿಕೆ ಜನ್ಯ ಇಂಧನಗಳ ಉರಿಸುವಿಕೆಯಿಂದ ಉಂಟಾಗಿರುವ ತೀವ್ರ ತಾಪಮಾನದಿಂದ ಈಗಾಗಲೇ ತತ್ತರಿಸುತ್ತಿರುವ ಭೂಮಿಯನ್ನು ಈ ನೂತನ ಎಲ್‌ನಿನೋ ಇನ್ನಷ್ಟು ಅಪಾಯಕ್ಕೊಡ್ಡಲಿದೆಯೆಂದು ಅವರು ಹೇಳಿದ್ದಾರೆ.

ಸೂಪರ್ ಎಲ್‌ನಿನೋ ದ ಉಪಸ್ಥಿತಿಯನ್ನು ಅಮೆರಿಕದ ರಾಷ್ಟ್ರೀಯ ಸಾಗರ ಹಾಗೂ ವಾತಾವರಣ ಇಲಾಖೆ (ಎನ್‌ಒಎಎ) ಅಧಿಕೃತವಾಗಿ ದೃಢಪಡಿಸಿದೆ. ಪೆಸಿಫಿಕ್ ಸಾಗರಪ್ರದೇಶದಲ್ಲಿ ನೀರಿನ ತಾಪಮಾನದ ಏರಿಕೆ ಮುಂದುವರಿದಿದೆ. ಈ ಚಳಿಗಾಲದ ಆರಂಭದ ವೇಳೆಗೆ ಎಲ್‌ನಿನೋ ಶೇ.63ಕ್ಕಿಂತಲೂ ಹೆಚ್ಚು ಪ್ರಬಲವಾಗಿರುವುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 1950ರಿಂದೀಚೆಗೆ ಭೂಮಿ ಕಂಡಂತಹ ಅತ್ಯಂತ ಗಂಭೀರವಾದ ಪರಿಸರ ವಿದ್ಯಮಾನ ಇದಾಗಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೆಸಿಫಿಕಂ ಸಾಗರದಾಳದಲ್ಲಿರುವ ಬಿಸಿಯಾದ ನೀರು, ಮೇಲ್ಮೈಗೆ ಬರುವುದನ್ನು ಎಲ್‌ನಿನೋ ಎಂದು ಕರೆಯಲಾಗುತ್ತದೆ. ಈ ವಿದ್ಯಮಾನವು ಜಗತ್ತಿನಾದ್ಯಂತ ಹವಾಮಾನ ಮಾದರಿಗಳನ್ನು ವ್ಯತ್ಯಗೊಳಿಸುತ್ತದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು, ಈ ಸಲದ ಎಲ್‌ನಿನೋ ವನ್ನು ಪಾರಿಸರಿಕ ತುರ್ತು ಸ್ಥಿತಿ ಎಂದು ಬಣ್ಣಿಸಿದ್ದಾರೆ. ಈಗಾಗಲೇ ಬಿಸಿಯೇರಿರುವ ಭೂಮಿಯನ್ನು ಅದು ಕೆಂಡದಂತಾಗಿಸಲಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries