HEALTH TIPS

NCERT ಮಹತ್ವದ ನಿರ್ಧಾರ: 9ನೇ ತರಗತಿ ಪಠ್ಯದಲ್ಲಿ ತುರ್ತುಪರಿಸ್ಥಿತಿ ವಿಷಯ ಅಳವಡಿಕೆ

 ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟ ಸುಮಾರು 50 ವರ್ಷಗಳ ಬಳಿಕ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಓಅಇಖಖಿ) 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ 'ತುರ್ತು ಪರಿಸ್ಥಿತಿ'ಗೆ ಸಂಬಂಧಿಸಿದ ವಿಷಯವನ್ನು ಸೇರ್ಪಡೆ ಮಾಡಿದೆ.


NCERT ಸಂಸ್ಥೆಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ಭಾರತದ ತುರ್ತುಪರಿಸ್ಥಿತಿಯ ಐತಿಹಾಸಿಕ ಘಟನೆಗಳನ್ನು ಮೊದಲ ಬಾರಿಗೆ ಅಳವಡಿಸಲು ನಿರ್ಧರಿಸಿದೆ.ಪ್ರಮುಖ ಅಂಶಗಳು• ಪಠ್ಯದಲ್ಲಿ ತುರ್ತುಪರಿಸ್ಥಿತಿಯ ಸೇರ್ಪಡೆಓಅಇಖಖಿ ಸಂಸ್ಥೆಯು ತನ್ನ 9ನೇ ತರಗತಿಯ 'ಸಮಾಜವನ್ನು ಅರ್ಥಮಾಡಿಕೊಳ್ಳುವುದು: ಇಂಡಿಯಾ ಅಂಡ್ ಬಿಯಾಂಡ್' ಪಠ್ಯಪುಸ್ತಕದಲ್ಲಿ 1975-77ರ ತುರ್ತುಪರಿಸ್ಥಿತಿಯ ವಿಷಯವನ್ನು ಸೇರಿಸಲು ನಿರ್ಧರಿಸಿದೆ.• ತುರ್ತುಪರಿಸ್ಥಿತಿಯ ಐತಿಹಾಸಿಕ ಹಿನ್ನೆಲೆ1970ರ ದಶಕದ ಆರಂಭದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಭ್ರಷ್ಟಾಚಾರದ ಆರೋಪಗಳಂತಹ ಸರ್ಕಾರ ವಿರೋಧಿ ಸನ್ನಿವೇಶಗಳು ಮತ್ತು ಸಾಮೂಹಿಕ ಅಸಮಾಧಾನವನ್ನು ಪಠ್ಯದಲ್ಲಿ ವಿವರಿಸಲಾಗಿದೆ.• ಮೂಲಭೂತ ಹಕ್ಕುಗಳ ಮೇಲೆ ಪ್ರಭಾವತುರ್ತುಪರಿಸ್ಥಿತಿಯ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ರಾಜಕೀಯ ನಾಯಕರ ಬಂಧನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಅಮಾನತಿನ ಕುರಿತು ಪಠ್ಯವು ಮಾಹಿತಿ ನೀಡುತ್ತದೆ.• ಜಯಪ್ರಕಾಶ್ ನಾರಾಯಣ್ ಅವರ ಪಾತ್ರಬಿಹಾರ ಮತ್ತು ಗುಜರಾತ್‌ನಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಸಂಘಟಿಸುವ ಮೂಲಕ ಪ್ರಜಾಪ್ರಭುತ್ವದ ಪರವಾಗಿ ಜಯಪ್ರಕಾಶ್ ನಾರಾಯಣ್ ನಡೆಸಿದ ಚಳವಳಿಗಳನ್ನು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.• ಶೈಕ್ಷಣಿಕ ಮಹತ್ವ ಮತ್ತು ಉದ್ದೇಶಭಾರತದ ಪ್ರಜಾಪ್ರಭುತ್ವ ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಒಂದಾದ ಈ ಐತಿಹಾಸಿಕ ಘಟನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಸೇರ್ಪಡೆಯ ಮುಖ್ಯ ಉದ್ದೇಶವಾಗಿದೆ.

'ಸಮಾಜವನ್ನು ಅರ್ಥಮಾಡಿಕೊಳ್ಳುವುದು: ಇಂಡಿಯಾ ಅಂಡ್ ಬಿಯಾಂಡ್' ಎಂಬ ಹೊಸ ಪಠ್ಯದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದ‌ಲ್ಲಿ ಭಾರತದ ಪ್ರಜಾಪ್ರಭುತ್ವ ಎದುರಿಸಿರುವ 'ಪ್ರಮುಖ ಸವಾಲುಗಳಲ್ಲಿ ಒಂದು' ((one of the major challenges) ಎಂಬ ವಿಷಯವನ್ನು ಸೇರಿಸಲಾಗಿದೆ.

ಭಾರತದಲ್ಲಿ ಪ್ರಜಾಪ್ರಭುತ್ವದ ಸಾಮರ್ಥ್ಯ ಮತ್ತು ಸವಾಲುಗಳನ್ನು ಚರ್ಚಿಸುವ ಅಧ್ಯಾಯದಲ್ಲಿ 'ತುರ್ತುಪರಿಸ್ಥಿಗೆ ಸಂಬಂಧಿಸಿದ ವಿಷಯವನ್ನು ಸೇರಿಸಲಾಗಿದೆ. 9ನೇ ತರಗತಿಯ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ವಿಷಯವನ್ನು ಸೇರಿಸಿರುವುದು ಇದೇ ಮೊದಲು ಎಂದು ಎನ್‌ಸಿಇಆರ್‌ಟಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವರದಿ ಪ್ರಕಾರ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಸೇರ್ಪಡೆ ಮಾಡಲಾಗಿದೆ. ಪಠ್ಯದಲ್ಲಿ ತುರ್ತುಪರಿಸ್ಥಿತಿ ಸೇರ್ಪಡೆಗೆ ಕಾರಣವಾದ ಘಟನೆಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಉಂಟುಮಾಡಿದ ಪ್ರಭಾವವನ್ನು ವಿವರಿಸುತ್ತದೆ.

'ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಎದುರಾದ ಪ್ರಮುಖ ಸವಾಲುಗಳಲ್ಲಿ 1975-77ರ ತುರ್ತು ಪರಿಸ್ಥಿತಿ ಒಂದು. 1970ರ ದಶಕದ ಆರಂಭದಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಮೇಲೆ ಸಾರ್ವಜನಿಕರ ಅಸಮಾಧಾನ ಹೆಚ್ಚುತ್ತಿತ್ತು. ನಿರುದ್ಯೋಗ, ಹಣದುಬ್ಬರ ಮತ್ತು ದುರಾಡಳಿತದ ಆರೋಪಗಳು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು' ಎಂಬುದನ್ನು ಪಠ್ಯವು ವಿವರಿಸುತ್ತದೆ ಎಂದು ವರದಿ ತಿಳಿಸಿದೆ.

'1975ರ ಜೂನ್‌ನಲ್ಲಿ ಆಂತರಿಕ ಗಲಭೆ ಆರಂಭವಾಗುತ್ತಿದ್ದಂತೆ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಿತು. ಈ ಅವಧಿಯಲ್ಲಿ ಬಹುಪಾಲು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಲಾಯಿತು. ಅನೇಕ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಪ್ರಜಾಪ್ರಭುತ್ವ ಸಂಸ್ಥೆಗಳು ತೀವ್ರ ಒತ್ತಡಕ್ಕೆ ಒಳಗಾದವು. ಮಾತ್ರವಲ್ಲ, ನಾಗರಿಕರ ಸ್ವಾತಂತ್ರ್ಯವನ್ನು ಕೂಡ ಕಿತ್ತುಕೊಳ್ಳಲಾಯಿತು' ಎಂಬುದನ್ನು ಪುಸ್ತಕ ವಿವರಿಸುತ್ತದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಹೋರಾಟವನ್ನು ಕೂಡ ಪಠ್ಯದಲ್ಲಿ ಅಳವಡಿಸಲಾಗಿದೆ. ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಚಳವಳಿಗಳು, ವಿಶೇಷವಾಗಿ ಬಿಹಾರ ಮತ್ತು ಗುಜರಾತ್‌ನಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಚಳವಳಿಗೆ ಹೇಗೆ ಸಜ್ಜುಗೊಳಿಸಿದರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries