HEALTH TIPS

ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಸನಿಹದಲ್ಲಿ NDA; ಲೋಕಸಭೆಯಲ್ಲಿ ಇನ್ನೂ ದೂರ

ನವದೆಹಲಿ: TMCಯಲ್ಲಿ ಬಂಡಾಯ ಭುಗಿಲೆದ್ದ ಬಳಿಕ ಬಿಜೆಪಿ ನೇತೃತ್ವದ NDA ಮೈತ್ರಿಕೂಟವು ಸಂಸತ್‌ ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಸನ್ನಾಹದಲ್ಲಿದೆ. ಬಂಡಾಯ TMC ಸಂಸದರ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಆಡಳಿತಾರೂಢ NDA ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತದ ಸನಿಹಕ್ಕೆ ಬಂದಿದ್ದರೆ, ಲೋಕಸಭೆಯಲ್ಲಿ ಆ ಗಡಿಯನ್ನು ತಲುಪಲು ಇನ್ನೂ ಕೆಲವು ಸ್ಥಾನಗಳ ಕೊರತೆ ಎದುರಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸಂಸತ್‌ ನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ TMC ಬಂಡಾಯ ಸಂಸದರ ಬೆಂಬಲ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ಮರುಮಂಡಿಸುವ ಸಾಧ್ಯತೆಗಳ ಕುರಿತು ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಮೊದಲ ಸುತ್ತಿನ ಚುನಾವಣೆಗಳ ನಂತರ ರಾಜ್ಯಸಭೆಯಲ್ಲಿ NDA ಮೈತ್ರಿಕೂಟದ ಬಲ 148ರಿಂದ 151ಕ್ಕೆ ಏರಿದೆ. ಇದರ ಜೊತೆಗೆ ಜಾರ್ಖಂಡ್ ಹಾಗೂ ಮಿಜೋರಾಂ ರಾಜ್ಯಗಳ ಪಕ್ಷೇತರ ಸದಸ್ಯರ ಬೆಂಬಲವನ್ನೂ ಪಡೆಯಲು ಅದು ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

TMCಯ ಮೂವರು ಸಂಸದರ ರಾಜೀನಾಮೆಯಿಂದ ಖಾಲಿಯಾಗಿರುವ ಪಶ್ಚಿಮ ಬಂಗಾಳದ ಮೂರು ರಾಜ್ಯಸಭಾ ಸ್ಥಾನಗಳನ್ನು ಮುಂಬರುವ ಉಪಚುನಾವಣೆಯಲ್ಲಿ NDA ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಈ ಸ್ಥಾನಗಳನ್ನು ಗೆದ್ದಲ್ಲಿ ರಾಜ್ಯಸಭೆಯಲ್ಲಿ NDA ಬಲ 154ಕ್ಕೆ ಏರಲಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ 163 ಸ್ಥಾನಗಳನ್ನು ತಲುಪಲು ಆಗ NDAಗೆ ಕೇವಲ 9 ಸ್ಥಾನಗಳ ಕೊರತೆ ಉಳಿಯಲಿದೆ.

ಪ್ರತಿಪಕ್ಷ INDIA ಮೈತ್ರಿಕೂಟವು ಪ್ರಸ್ತುತ ರಾಜ್ಯಸಭೆಯಲ್ಲಿ 64 ಸಂಸದರ ಬೆಂಬಲ ಹೊಂದಿದೆ. ಆದರೆ 8 ಮಂದಿ ಸಂಸದರಿರುವ DMK ನಿರ್ಗಮನದಿಂದ ಅದರ ಬಲ ಕುಸಿದಿದೆ. ಇದರ ಜೊತೆಗೆ AAPನ ಮೂವರು ಸಂಸದರೂ INDIA ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ AAPನ 10 ಸಂಸದರ ಪೈಕಿ 7 ಮಂದಿ ಸಂಸದರು ಎಪ್ರಿಲ್‌ ನಲ್ಲಿ ರಾಘವ್ ಚಡ್ಡಾ ನೇತೃತ್ವದಲ್ಲಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇತ್ತ ಲೋಕಸಭೆಯಲ್ಲಿ 20 ಬಂಡಾಯ TMC ಸಂಸದರು ಪ್ರತ್ಯೇಕ ಗುಂಪು ರಚಿಸಿಕೊಂಡು ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಆದರೆ, 543 ಸದಸ್ಯ ಬಲದ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ 363 ಸದಸ್ಯರ ಬೆಂಬಲವನ್ನು ತಲುಪಲು NDAಗೆ ಇನ್ನೂ ಕೆಲವು ಸ್ಥಾನಗಳ ಕೊರತೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries