HEALTH TIPS

ಅಮೆರಿಕದಿಂದ ಸತತ 10ನೇ ದಿನವೂ ಮುಂದುವರಿದ ಮಿಲಿಟರಿ ಕಾರ್ಯಾಚರಣೆ : ಕುವೈತ್, ಬಹರೈನ್‌ನಲ್ಲಿನ ಯುಎಸ್‌ ನೆಲೆಗಳ ಮೇಲೆ ಇರಾನ್‌ನಿಂದ ಪ್ರತಿದಾಳಿ

 ಟೆಹರಾನ್ : ಕುವೈತ್ ಹಾಗೂ ಬಹರೈನ್‌ನ ವಾಯುರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಅಮೆರಿಕದ ಮಿಲಿಟರಿ ಗುರಿಗಳ ಮೇಲೆ ತಾನು ದಾಳಿ ನಡೆಸಿರುವುದಾಗಿ ಇರಾನ್ ಮಂಗಳವಾರ ತಿಳಿಸಿದೆ. ಇರಾನ್‌ನಾದ್ಯಂತ ವಿವಿಧ ಸ್ಥಳಗಳಲ್ಲಿ ಅಮೆರಿಕ ಪಡೆಗಳು ಸತತ 10ನೇ ದಿನವೂ ನಡೆಸಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಿರುವುದಾಗಿ ಇರಾನ್‌ನ ರಕ್ಷಣಾ ಪಡೆ ಐಆರ್‌ಜಿಸಿ ಹೇಳಿಕೊಂಡಿದೆ. 


ಬಹರೈನ್ ಎರಡು ಹೊರಠಾಣೆಗಳಲ್ಲಿನ ರಾಡಾರ್ ಸ್ಥಾಪನೆಗಳು ಹಾಗೂ ಎರಡು ವಾಯುರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ಇರ್ನಾ ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಕುವೈತ್‌ನಲ್ಲಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು, ರಾಡಾರ್‌ಗಳು ಹಾಗೂ ಉಪಗ್ರಹಗಳ ಸ್ವೀಕರಣಾ ವ್ಯವಸ್ಥೆ (ಸ್ಟಾಟಲೈಟ್ ರಿಸೆಪ್ಶನ್ ಸಿಸ್ಟಮ್‌ಗಳು)ಗಳು ಇರಾನ್‌ನ ಹೊಸ ಸರಣಿ ದಾಳಿಗಳಿಗೆ ಗುರಿಯಾಗಿವೆ.

ಇರಾನ್ ಮೇಲೆ ಸತತ 10ನೇ ದಿನ ರಾತ್ರಿಯೂ ಇರಾನ್ ಮೇಲೆ ದಾಳಿಗಳನ್ನು ನಡೆಸಿವುದಾಗಿ ಅಮೆರಿಕದ ಕೇಂದ್ರೀಯ ಕಮಾಂಡ್ (ಸೆಂಟ್‌ಕಾಮ್) ತಿಳಿಸಿದ್ದು, ಹಾರ್ಮುಝ್ ಜಲಸಂಧಿಯನ್ನು ತೆರೆಯುಂತೆ ಮಾಡುಲು ಸೇನಾಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವುದಾಗಿ ಹೇಳಿದೆ.

ಇರಾನ್ ಸಂಘರ್ಷದಲ್ಲಿ ಅಮೆರಿಕನ್ ಯೋಧರು ಸಾವನ್ನಪ್ಪಿರುವ ಕುರಿತು ಇರಾನ್‌ಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕ ಸೇನೆ, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.

ಇರಾನ್‌ನ ಸೇನಾ ಕಮಾಂಡ್ ಕೇಂದ್ರಗಳು, ಸಮುದ್ರಯಾನ ಸಾಮರ್ಥ್ಯಗಳು, ಕ್ಷಿಪಣಿ ಹಾಗೂ ಡ್ರೋನ್ ಉಡಾವಣಾ ವ್ಯವಸ್ಥೆಗಳನ್ನು ಹಾಗೂ ವಾಯುರಕ್ಷಣಾ ವ್ಯವಸ್ಥೆಯನ್ನು ಗುರಿಯಿರಿಸಿ ದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್‌ಕಾಮ್ ತಿಳಿಸಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ನೌಕೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಕುಗ್ಗಿಸಲು ಈ ಕಾರ್ಯಾಚರಣೆ ನಡೆಸಿರುವುದಾಗಿ ಅದು ತಿಳಿಸಿದೆ.

ಅಮೆರಿಕ ಹಾಗೂ ಇರಾನ್ ಪರಸ್ಪರರ ವಿರುದ್ಧ ದಾಳಿಗಳನ್ನು ನಡೆಸುವುದನ್ನು ಮುಂದುವರಿಸಿದ ಹೊರತಾಗಿಯೂ, ಇರಾನ್‌ನ ಗೃಹಸಚಿವ ಎಸ್ಕಂದಾರ್ ಮೊಮೆನಿ ಅವರು ಪಶ್ಚಿಮ ಏಶ್ಯಾದಲ್ಲಿ ಶಾಂತಿ ಮರುಸ್ಥಾಪನೆಯ ನಿಟ್ಟಿನಲ್ಲಿ ಪಾಕ್ ನಾಯಕರ ಜೊತೆ ಮಾತುಕತೆ ನಡೆಸಲು ಮಂಗಳವಾರ ಇಸ್ಲಮಾಬಾದ್‌ಗೆ ಆಗಮಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries