HEALTH TIPS

ಜಾಗತಿಕ ವಾಸಯೋಗ್ಯ ನಗರಗಳ ಸೂಚ್ಯಂಕದಲ್ಲಿ ಹೊಸದಿಲ್ಲಿಗೆ 120ನೇ ಸ್ಥಾನ : ಅಗ್ರಸ್ಥಾನ ಕಾಯ್ದುಕೊಂಡ ಕೋಪನ್‌ಹೇಗನ್

 ನವದೆಹಲಿ:  ಜಾಗತಿಕ ವಾಸಯೋಗ್ಯ ನಗರಗಳ ಸೂಚ್ಯಂಕದಲ್ಲಿ ಹೊಸದಿಲ್ಲಿ 120ನೇ ಸ್ಥಾನ ಪಡೆದುಕೊಂಡಿದ್ದು, ಭಾರತದಲ್ಲಿ ಹೆಚ್ಚು ವಾಸಯೋಗ್ಯ ನಗರವಾಗಿ ಆಯ್ಕೆಯಾಗಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಈ ವಾರ ಬಿಡುಗಡೆ ಮಾಡಿರುವ ಗ್ಲೋಬಲ್ ಲಿವೆಬಿಲಿಟಿ ಇಂಡೆಕ್ಸ್ 2026 ವರದಿಯಲ್ಲಿ, ಡೆನ್ಮಾರ್ಕ್‌ನ ಕೋಪನ್ಹೇಗನ್ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಆಸ್ಟ್ರಿಯಾದ ವಿಯೆನ್ನಾ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ. 


ಜಗತ್ತಿನ 173 ನಗರಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಭಾರತದಿಂದ ಮುಂಬೈ 121ನೇ ಸ್ಥಾನ, ಚೆನ್ನೈ 123ನೇ ಸ್ಥಾನ ಮತ್ತು ಬೆಂಗಳೂರು 127ನೇ ಸ್ಥಾನಗಳಲ್ಲಿದೆ. ಹೊಸದಿಲ್ಲಿ ಮತ್ತು ಮುಂಬೈ ನಗರಗಳ ಶ್ರೇಯಾಂಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಚೀನಾದ 10 ನಗರಗಳು 2025ಕ್ಕೆ ಹೋಲಿಸಿದರೆ ಈ ವರ್ಷ ತಮ್ಮ ಶ್ರೇಯಾಂಕವನ್ನು ಉತ್ತಮಪಡಿಸಿಕೊಂಡಿವೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಪಶ್ಚಿಮ ಯುರೋಪ್ ಇಂದಿಗೂ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಅತ್ಯಂತ ಬಲಿಷ್ಠ ಪ್ರದೇಶವಾಗಿ ಮುಂದುವರಿದಿದೆ. ಆದರೆ, ಅದರ ಸರಾಸರಿ ಅಂಕಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಈ ಮಧ್ಯೆ, ಏಷ್ಯಾದ ನಗರಗಳ ಅಂಕಗಳಲ್ಲಿ ಏರಿಕೆ ಕಂಡುಬಂದಿದ್ದು, ಇರಾನ್ ಯುದ್ಧವು ಗಲ್ಫ್ ಪ್ರದೇಶಗಳ ಸ್ಥಿರತೆಯನ್ನು ಕುಗ್ಗಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಜನಾಗ್ರಹ ಸಂಸ್ಥೆಯ ಸಿಇಒ ಶ್ರೀಕಾಂತ್ ವಿಶ್ವನಾಥನ್, "ನಮ್ಮ ನಗರಗಳು ಪಟ್ಟಿಯಲ್ಲಿ ಕೆಳಮಟ್ಟದ ಸ್ಥಾನ ಪಡೆದಿರುವುದು, ನಾವು ಜಾಗತಿಕ ಹೂಡಿಕೆದಾರರು ಮತ್ತು ಪ್ರತಿಭೆಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದೇವೆ ಎಂಬುವುದನ್ನು ಸೂಚಿಸುತ್ತದೆ. ನಾವು ನಮ್ಮ ನಗರಗಳನ್ನು ಹೆಚ್ಚು ಬಲಿಷ್ಠ ಹಾಗೂ ವಾಸಯೋಗ್ಯವಾಗಿ ರೂಪಿಸಬೇಕಾದ ಅಗತ್ಯವಿದೆ" ಎಂದು ತಿಳಿಸಿದ್ದಾರೆ. ಜನಾಗ್ರಹ ಸಂಸ್ಥೆಯು ನಗರಾಡಳಿತದ ಕುರಿತು ಕೆಲಸ ಮಾಡುತ್ತಿರುವ ಖಾಸಗಿ ಸಂಸ್ಥೆಯಾಗಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries