HEALTH TIPS

ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕ: 125ನೇ ಸ್ಥಾನದಲ್ಲಿ ಭಾರತ

ನವದೆಹಲಿ: ಇದೀಗ ಬಿಡುಗಡೆಯಾಗಿರುವ 2026ರ ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತ 125ನೇ ಸ್ಥಾನದಲ್ಲಿದೆ. ಇದು ಪ್ರಯಾಣ ಕೇಂದ್ರಿತ ಹೆನ್ಲಿ ಸೂಚ್ಯಂಕದಲ್ಲಿ 80ನೇ ಸ್ಥಾನದಲ್ಲಿರುವ ಭಾರತದ ಸೂಚ್ಯಂಕಕ್ಕಿಂತ ತೀರಾ ಭಿನ್ನವಾಗಿದೆ.

ಹೆನ್ಲಿ ವೀಸಾ ಮುಕ್ತ ಪ್ರಯಾಣ ಸ್ವಾತಂತ್ರ್ಯವನ್ನು ಅಳೆಯುತ್ತಿದ್ದರೆ, ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್ ಸೂಚ್ಯಂಕವು ಜಾಗತಿಕ ಚಲನಶೀಲತೆ, ಹೂಡಿಕೆಯ ಅವಕಾಶಗಳು ಮತ್ತು ಸ್ಥಳೀಯ ಜೀವನ ಗುಣಮಟ್ಟವನ್ನು ಪರಿಗಣಿಸುವ ಸಮಗ್ರ ಸಂಯೋಜಿತ ಅಂಕಗಳ ಮೂಲಕ ಸುಮಾರು 200 ದೇಶಗಳ ಮೌಲ್ಯಮಾಪನ ಮಾಡುತ್ತದೆ.

ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕವು ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆಯಂತಹ ಸಂಸ್ಥೆಗಳಿಂದ 14 ಸೂಚಕಗಳನ್ನು ಬಳಸಿಕೊಳ್ಳುತ್ತದೆ. ಈ ಸೂಚಕಗಳಲ್ಲಿ ಶೇ. 50ರಷ್ಟು ವರ್ಧಿತ ಚಲನಶೀಲತೆಯನ್ನು ಅಳೆಯಲಾಗುತ್ತದೆ. ಇದರಡಿ ವೀಸಾ ಮುಕ್ತ ಹಾಗೂ ವೀಸಾ ಆಗಮನ, ಪ್ರವೇಶವನ್ನು ಅಳೆಯಲಾಗುತ್ತದೆ. ಈ ಸೂಚಕಗಳಲ್ಲಿ ಶೇ. 25ರಷ್ಟು ಹೂಡಿಕೆ ಸಾಮರ್ಥ್ಯಗಳನ್ನು ಅಳೆಯಲಾಗುತ್ತದೆ ಹಾಗೂ ಆರ್ಥಿಕ ಅವಕಾಶಗಳನ್ನು ನೋಡಲಾಗುತ್ತದೆ. ಉಳಿದ ಶೇ. 25ರಷ್ಟರಲ್ಲಿ ಆರೋಗ್ಯ ರಕ್ಷಣೆ, ಸ್ಥಿರತೆ ಮತ್ತು ಮೂಲಸೌಕರ್ಯದಂತಹ ಜೀವನ ಮಟ್ಟವನ್ನು ಅಳೆಯಲಾಗುತ್ತದೆ.

ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಚಲನಶೀಲತೆ ಶ್ರೇಯಾಂಕವು 135ನೇ ಸ್ಥಾನದಲ್ಲಿದ್ದರೆ, ಜೀವನ ಗುಣಮಟ್ಟದ ಶ್ರೇಯಾಂಕವು 118ನೇ ಸ್ಥಾನದಲ್ಲಿದೆ. ಜೀವನ ಗುಣಮಟ್ಟ ಹಾಗೂ ಹೂಡಿಕೆ ವಲಯಗಳಿಗಿಂತ, ಚಲನಶೀಲತೆ ಶ್ರೇಯಾಂಕದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ.

ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಯುರೋಪ್ ದೇಶಗಳು ಪ್ರಾಬಲ್ಯ ಸಾಧಿಸಿದ್ದು, ಶೇ. 96.05 ಅಂಕಗಳೊಂದಿಗೆ ಸ್ವೀಡನ್ ಮೊದಲ ಸ್ಥಾನದಲ್ಲಿದೆ. ಸ್ವಿಝರ್ಲೆಂಡ್ ಮತ್ತು ಫಿನ್ಲೆಂಡ್ ಕ್ರಮವಾಗಿ ಎರಡನೇ ಮತ್ತು ಮೂರನೆ ಸ್ಥಾನದಲ್ಲಿವೆ. ಉಳಿದಂತೆ ಜರ್ಮನಿ, ನೆದರ್ಲೆಂಡ್ಸ್, ಡೆನ್ಮಾರ್ಕ್, ಐರ್ಲೆಂಡ್, ಬ್ರಿಟನ್ ಹಾಗೂ ನಾರ್ವೆ ದೇಶಗಳೂ ಅಗ್ರ 10ರ ಪಟ್ಟಿಯಲ್ಲಿವೆ.

ಅಗ್ರ 10ರ ಪಟ್ಟಿಯಲ್ಲಿ ಯುರೋಪ್ ದೇಶಗಳು ಪ್ರಾಬಲ್ಯ ಸಾಧಿಸಿದ್ದು, ಸಿಂಗಾಪುರರ ಮಾತ್ರ ಅಗ್ರ 10ರ ಪಟ್ಟಿಯಲ್ಲಿರುವ ಏಕೈಕ ಯುರೋಪೇತರ ದೇಶವಾಗಿದೆ. 23.10 ಅಂಕಗಳನ್ನು ಪಡೆದಿರುವ ಅಫ್ಘಾನಿಸ್ತಾನ, ಜಾಗತಿಕ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries