HEALTH TIPS

16ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದ ನಿಶಾ...

 ಜಗತ್ತಿನ ಅತಿ ಎತ್ತರದ ಹಿಮ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರುವುದು ಪ್ರತಿಯೊಬ್ಬ ಪರ್ವತಾರೋಹಿಯ ಕನಸು. ಅದಕ್ಕಾಗಿ ವರ್ಷಗಟ್ಟಲೇ ತರಬೇತಿ ಪಡೆದುಕೊಂಡು ಪರ್ವತ ಏರುತ್ತಾರೆ. ಆ ಪೈಕಿ ಕೆಲವರು ಮಾತ್ರ ಸಫಲರಾಗುತ್ತಾರೆ. ಮೌಂಟ್ ಎವರೆಸ್ಟ್ ಅನ್ನು 16ನೇ ವಯಸ್ಸಿನಲ್ಲಿಯೇ ಏರುವ ಮೂಲಕ ಯಾರೂ ಮಾಡದ ದಾಖಲೆಯನ್ನು ತಮಿಳುನಾಡಿನ ನಿಶಾ ಶಶಿಕುಮಾ‌ರ್ ಮಾಡಿದ್ದಾರೆ.


16ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದ ನಿಶಾ...

ಒಂದು ಸಾಲಿನಲ್ಲಿತಮಿಳುನಾಡಿನ ನಿಶಾ ಶಶಿಕುಮಾರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ನೇಪಾಳದ ಸೌತ್ ಕೋಲ್ ಮಾರ್ಗದ ಮೂಲಕ ಎವರೆಸ್ಟ್ ಶಿಖರ ಏರಿದ ಅತ್ಯಂತ ಕಿರಿಯ ಮಹಿಳಾ ಪರ್ವತಾರೋಹಿ ಎಂಬ ದಾಖಲೆ ಬರೆದಿದ್ದಾರೆ.

ನಿಶಾ ಶಶಿಕುಮಾರ್ ಅವರ ದಾಖಲೆ ಯಾವುದು?

ತಮಿಳುನಾಡಿನ ನಿಶಾ ಶಶಿಕುಮಾರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ನೇಪಾಳದ ಸೌತ್ ಕೋಲ್ ಮಾರ್ಗದ ಮೂಲಕ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತ್ಯಂತ ಕಿರಿಯ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರೋಹಣದ ಸಂದರ್ಭದಲ್ಲಿ ಎದುರಾದ ಸವಾಲೇನು?

ಆರೋಹಣದ 45ನೇ ದಿನದಂದು ನಿಶಾ ಅವರ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾದರು, ಇದರಿಂದಾಗಿ ಅವರು ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿ ಮರಳುವಂತಾಯಿತು.

ನಿಶಾ ಅವರು ಪರ್ವತಾರೋಹಣವನ್ನು ಮುಂದುವರಿಸಿದ್ದು ಹೇಗೆ?

ತಂದೆಯ ಅನುಪಸ್ಥಿತಿಯ ಹೊರತಾಗಿಯೂ, ಮಾರ್ಗದರ್ಶಕ ಶೆರ್ಪಾ ಅವರ ಸಹಾಯದಿಂದ ಮತ್ತು ವಾಕಿ-ಟಾಕಿ ಮೂಲಕ ಸ್ನೇಹಿತರ ಪ್ರೋತ್ಸಾಹದಿಂದ ನಿಶಾ ಮಾನಸಿಕವಾಗಿ ದೃಢರಾಗಿ ತಮ್ಮ ಹಾದಿಯನ್ನು ಮುಂದುವರಿಸಿದರು.

ಸಾವಿನ ವಲಯದಲ್ಲಿ ಕಳೆದ ಅನುಭವ ಹೇಗಿತ್ತು?

8,000 ಮೀಟರ್‌ಗಿಂತ ಎತ್ತರವಿರುವ 'ಸಾವಿನ ವಲಯ'ದಲ್ಲಿ ಆಮ್ಲಜನಕದ ಕೊರತೆಯ ನಡುವೆಯೂ ನಿಶಾ ಧೈರ್ಯದಿಂದ ಮೂರು ರಾತ್ರಿಗಳನ್ನು ಕಳೆದು ಯಶಸ್ವಿಯಾಗಿ ಶಿಖರ ತಲುಪಿದರು.

ನಿಶಾ ಅವರ ಈ ಸಾಧನೆಯನ್ನು ಗುರುತಿಸಿದ್ದು ಹೇಗೆ?

ಜುಲೈ 24ರಂದು ಬೆಂಗಳೂರಿನಲ್ಲಿ ನಡೆದ 15ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಶೃಂಗಸಭೆಯಲ್ಲಿ ನಿಶಾ ಅವರ ಈ ಅಪೂರ್ವ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಪ್ರಮುಖ ಅಂಕಿಅಂಶಗಳು

16ನಿಶಾ ಅವರ ವಯಸ್ಸುಮೇ 25ಶಿಖರ ಏರಿದ ದಿನಾಂಕಜುಲೈ 24ಸನ್ಮಾನ ನಡೆದ ದಿನಾಂಕ4782023ರಲ್ಲಿ ಎವರೆಸ್ಟ್ ಏರಿದ ಒಟ್ಟು ಸಾಹಸಿಗಳು

ಮೇ 25ರಂದು ನೇಪಾಳದ ಸೌತ್ ಕೋಲ್ ಮಾರ್ಗದ ಮೂಲಕ ಎವರೆಸ್ಟ್ ಶಿಖರ ಏರಿದ ಅತ್ಯಂತ ಕಿರಿಯ ಯುವತಿ ಎಂಬ ಹೆಗ್ಗಳಿಕೆಗೆ ನಿಶಾ ಪಾತ್ರರಾಗಿದ್ದಾರೆ. ಈ ಸಾಧನೆಯ ಹಿಂದೆ ಅವರ ಕಠಿಣ ಪರಿಶ್ರಮ ಹಾಗೂ ಮಾನಸಿಕ ಸ್ಥಿರತೆ ಇರುವುದಾಗಿ ಹೇಳಿಕೊಂಡಿದ್ದಾರೆ. ಜುಲೈ 24ರಂದು ಬೆಂಗಳೂರಿನಲ್ಲಿ ನಡೆದ 15ನೇ ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಶೃಂಗಸಭೆಯಲ್ಲಿ ನಿಶಾ ಅವರನ್ನು ಸನ್ಮಾನಿಸಲಾಯಿ‌ತು.

32ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಕಾಮಿ ರೀಟಾ ಶೆರ್ಪಾಬೆಂಗಳೂರು: ಮೌಂಟ್ ಎವರೆಸ್ಟ್ ಏರಲಿರುವ ಪರ್ವತಾರೋಹಿಗಳಿಗೆ ಶುಭ ಹಾರೈಕೆಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅಂಧ ಮಹಿಳೆ ಮೌಂಟ್ ಎವರೆಸ್ಟ್ ಏರಿ 70ನೇ ವರ್ಷ; 2023ರಲ್ಲಿ ಶಿಖರವೇರಿದ 478 ಸಾಹಸಿಗಳು

ಎವರೆಸ್ಟ್ ಏರಲು ಆರಂಭಿಸಿದಾಗ ನಿಶಾ ಅವರ ಜೊತೆಗೆ ಅವರ ತಂದೆ ಕೂಡ ಇದ್ದರು. 45ನೇ ದಿನದವರೆಗೂ ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿತ್ತು. ಆದರೆ 45ನೇ ದಿನ ಆರೋಹಣದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಅವರ ತಂದೆ ತೀವ್ರವಾದ ಅನಾರೋಗ್ಯಕ್ಕೆ (ಅಕ್ಯೂಟ್ ಮೌಂಟನ್ ಸಿಕ್ನೆಸ್) ತುತ್ತಾದರು. ಹೀಗಾಗಿ ಅವರು ಆರೋಹಣವನ್ನು ನಿಲ್ಲಿಸಿ ಮರಳಬೇಕಾಯಿತು.

ಆಗ ನಿಶಾ ತನ್ನ ಮಾರ್ಗದರ್ಶಕರಾದ ಶೆರ್ಪಾ ಅವರೊಂದಿಗೆ ಆರೋಹಣವನ್ನು ಮುಂದಿವರಿಸಲು ನಿರ್ಧರಿದರು. 'ಅತ್ಯಂತ ಕಠಿಣ ಭಾಗ ಪರ್ವತವಲ್ಲ. ನನ್ನ ತಂದೆ ಇಲ್ಲದೆ ನಾನು ಪರ್ವತನ್ನು ಆರೋಹಣ ಮಾಡುವುದು' ಎಂದು ನಿಶಾ ನೆನಪಿಸಿಕೊಂಡಿದ್ದಾರೆ. ಈ ಹಾದಿಯಲ್ಲಿ ಮಾನಸಿಕ ಒತ್ತಡವಿತ್ತು. ಆದರೆ ನಾನು ಪರ್ವತವನ್ನು ಯಶಸ್ವಿಯಾಗಿ ಏರಲು ಪರ್ವತಕ್ಕಿಂತ ದೊಡ್ಡದಾದ ಕಾರಣವಿತ್ತು' ಎಂದು ಹೇಳಿಕೊಂಡಿದ್ದಾರೆ.

ಮಾರ್ಗದರ್ಶಕರೊಂದಿಗೆ ಪರ್ವತವನ್ನು ಏರುತ್ತಾ, ಹವಾಮಾನದ ಬದಲಾವಣೆ ನಡುವೆ ಜಯಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ. ಆಮ್ಲಜನಕದ ಮಟ್ಟ ಕಡಿಮೆ ಇರುವ 'ಸಾವಿನ ವಲಯ' ಎಂತಲೇ ಕರೆಯುವ 8,000 ಮೀಟರ್‌ಗಿಂತಲೂ ಎತ್ತರದಲ್ಲಿ ನಿಶಾ ಧೈರ್ಯದಿಂದ ಮೂರು ರಾತ್ರಿಗಳನ್ನು ಕಳೆದರು.

ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಭೇಟಿಯಾಗಿದ್ದ ಇಬ್ಬರು, ಆರೋಹಣದ ಸಮಯದಲ್ಲಿ ಮೃತಪಟ್ಟ ವಿಷಯವೂ ನನಗೆ ತಿಳಿಯಿತು. ಇದು ನನ್ನನ್ನು ಮಾನಸಿಕವಾಗಿ ಕುಗ್ಗಿಸಿತು. ಕೆಲವೊಮ್ಮೆ ಆರೋಹಣವನ್ನು ಅರ್ಧಕ್ಕೆ ಕೈಬಿಡುವ ಯೋಚನೆಯನ್ನೂ ಮಾಡಿದ್ದುಂಟು ಎಂದು ನಿಶಾ ತಿಳಿಸಿದ್ದಾರೆ.

ಇದೇ ವೇಳೆ ವಾಕಿ-ಟಾಕಿಯ ಮೂಲಕ ಸ್ನೇಹಿತ, ಆಗಾಗ 'ಕುಶಲೋಪರಿಯನ್ನು ವಿಚಾರಿಸುತ್ತಾ, ಶಿಬಿರ 3ಕ್ಕೆ ಹೋಗಿ ವಿಶ್ರಾಂತಿ ಪಡೆಯಿರಿ' ಎಂಬ ಸಂದೇಶವನ್ನು ಕಳುಹಿಸುತ್ತಿದ್ದರು. ಇದು ಮುಂದೆ ಸಾಗಲು ಪ್ರೇರಣೆಯಯಾಯಿತು ಎಂದಿದ್ದಾರೆ.

ಆರೋಹಣದ ಅನುಭವದ ಕುರಿತು ಮಾತನಾಡಿರುವ ನಿಶಾ, ' ನಾನು ತಲೆ ಎತ್ತಿ ಮೇಲಕ್ಕೆ ನೋಡಿದೆ. ಅಂತಿಮವಾಗಿ ತಲುಪಿದ್ದೇನೆ ಎಂದು ತಿಳಿದ ಮೇಲೆ ನನ್ನ ಕಣ್ಣಲ್ಲಿ ಕಣ್ಣೀರು ಬಂತು. 20 ನಿಮಿಷಗಳ ಕಾಲ ತುದಿಯಿಂದ ಹಿಮಾಲಯದ ಸೌಂದರ್ಯವನ್ನು ಸವಿದು ನಂತರ ಮರಳಿದೆವು' ಎಂದು ಹೇಳಿಕೊಂಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries