HEALTH TIPS

ಪರಿಸರ ನಿರ್ವಹಣೆ ಸೂಚ್ಯಂಕ : ಭಾರತಕ್ಕೆ 177 ದೇಶಗಳ ಪೈಕಿ 176ನೇ ಸ್ಥಾನ!

ನವದೆಹಲಿ: 2026ರ ಪರಿಸರ ನಿರ್ವಹಣೆ ಸೂಚ್ಯಂಕದಲ್ಲಿ, ಭಾರತವು 177 ದೇಶಗಳ ಪೈಕಿ 176ನೇ ಸ್ಥಾನದಲ್ಲಿದೆ.


ಪರಿಸರ ನಿರ್ವಹಣೆ ಸೂಚ್ಯಂಕ ಎನ್ನುವುದು ಪರಿಸರ ಆರೋಗ್ಯ, ಪರಿಸರ ವ್ಯವಸ್ಥೆಯ ಜೀವಂತಿಕೆ ಮತ್ತು ಹವಾಮಾನ ಬದಲಾವಣೆಯ ಜಾಗತಿಕ ಮೌಲ್ಯಮಾಪನವಾಗಿದೆ.

ಸೂಚ್ಯಂಕದಲ್ಲಿ, ದಕ್ಷಿಣ ಏಶ್ಯದ ಎಂಟು ದೇಶಗಳ ಪೈಕಿ ಭಾರತವು ಕೊನೆಯ ಸ್ಥಾನದಲ್ಲಿದೆ. ಭೂತಾನ್, ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನ, ಮಾಲ್ದೀವ್ಸ್ ಮತ್ತು ಬಾಂಗ್ಲಾದೇಶ ದೇಶಗಳು ಭಾರತಕ್ಕಿಂತ ಮುಂದಿವೆ.

ಭಾರತವು 100 ಅಂಕಗಳ ಪೈಕಿ 22.4 ಅಂಕಗಳನ್ನು ಪಡೆದುಕೊಂಡಿದೆ. 74.79 ಅಂಕಗಳನ್ನು ಪಡೆದುಕೊಂಡಿರುವ ಎಸ್ಟೋನಿಯ ಸೂಚ್ಯಂಕದಲ್ಲಿ ಅಗ್ರ ಸ್ಥಾನದಲ್ಲಿದೆ.

ಯೇಲ್ ಮತ್ತು ಕೊಲಂಬಿಯ ವಿಶ್ವವಿದ್ಯಾನಿಲಯಗಳು ಹಾಗೂ ಇತರ ಸಂಸ್ಥೆಗಳ ಸಂಶೋಧಕರು ಎರಡು ವರ್ಷಗಳಿಗೊಮ್ಮೆ 177 ದೇಶಗಳನ್ನು ಮೌಲ್ಯಮಾಪನಕ್ಕೊಳಗಪಡಿಸಿ ಪರಿಸರ ನಿರ್ವಹಣೆ ಸೂಚ್ಯಂಕವನ್ನು ಸಿದ್ಧಪಡಿಸುತ್ತಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries