HEALTH TIPS

ಜಗತ್ತಿನ ಅತ್ಯಂತ ಸುರಕ್ಷತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಒಮಾನ್‌ಗೆ ದ್ವಿತೀಯ ಸ್ಥಾನ : ನಂ.1 ಸ್ಥಾನ ಉಳಿಸಿಕೊಂಡ ಸಿಂಗಾಪುರ

 ಮಸ್ಕತ್: ಜಾಗತಿಕವಾಗಿ ಅತ್ಯಂತ ಸುರಕ್ಷತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸುಲ್ತಾನೇಟ್ ಆಫ್ ಓಮಾನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. 'ಅಮೆರಿಕ ನ್ಯೂಸ್ ಆಯಂಡ್ ವರ್ಲ್ಡ್ ರಿಪೋರ್ಟ್' ಮಾಧ್ಯಮ ಸಂಸ್ಥೆಯು ಗುರುವಾರ ಬಿಡುಗಡೆಗೊಳಿಸಿದ 2026 ಜಾಗತಿಕ ಸುರಕ್ಷತಾ ಸೂಚ್ಯಂಕದಲ್ಲಿ ಒಮಾನ್ ಈ ಪ್ರತಿಷ್ಠಿತ ಸಾಧನೆಯನ್ನು ಮಾಡಿದೆ. 


ಪಟ್ಟಿಯಲ್ಲಿ ಸಿಂಗಾಪುರವು ಮೊದಲ ಸ್ಥಾನವನ್ನು ಈ ಸಲವೂ ಉಳಿಸಿಕೊಂಡಿದೆ. ಆದರೆ ಒಮಾನ್ ದ್ವಿತೀಯ ಸ್ಥಾನಕ್ಕೇರುವ ಮೂಲಕ ಜಪಾನ್, ಖತರ್, ನ್ಯೂಝಿಲ್ಯಾಂಡ್ ಹಾಗೂ ಸ್ವಿಝರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಕಡಿಮೆ ಅಪರಾಧ ಪ್ರಮಾಣ, ಪರಿಣಾಮಕಾರಿ ಪೊಲೀಸ್ ಹಾಗೂ ಕಾನೂನು ಅನುಷ್ಠಾನ ವ್ಯವಸ್ಥೆಗಳು, ರಾಜಕೀಯ ಸ್ಥಿರತೆ, ತುರ್ತು ಸನ್ನಿವೇಶಗಳನ್ನು ನಿಭಾಯಿಸಲು ಸನ್ನದ್ಧತೆ, ಉತ್ತಮ ಮೂಲ ಸೌಕಯ ಹಾಗೂ ಸಾರ್ವಜನಿಕ ಸುರಕ್ಷತಾ ಜಾಗೃತಿ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಈ ಪಟ್ಟಿಯಲ್ಲಿ ರ್ಯಾಂಕಿಂಗ್ ನೀಡಲಾಗುತ್ತದೆ. ಈ ಅಂತಾರಾಷ್ಟ್ರೀಯ ಮಾನ್ಯತೆಯು ಒಮಾನ್‌ನ ಸುಸ್ಥಿರ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಹಾಗೂ ಹೂಡಿಕೆ ಸಾಮಥ್ಯವನ್ನ್ನು ಉತ್ತೇಜಿಸಲಿದೆ ಹಾಗೂ 'ಒಮಾನ್‌ನ ವಿಶನ್ 2040'ರ ಗುರಿಗಳನ್ನು ಈಡೇರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಒಮಾನ್ ಆಡಳಿತದ ಮೂಲಗಳು ತಿಳಿಸಿವೆ.

ಆಧುನಿಕ ಪೊಲೀಸ್ ವ್ಯವಸ್ಥೆ, ಉತ್ತಮ ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳು ಹಾಗೂ ನವೀನ ತಂತಜ್ಞಾನಗಳ ಆಳವಡಿಕೆ ಒಮಾನ್‌ನ ಭದ್ರತಾ ಏಜೆನ್ಸಿಗಳ ಸಾಮರ್ಥ್ಯವನ್ನು ಬಲಪಡಿಸಿವೆಯೆಂದು ವರದಿಗಳು ತಿಳಿಸಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries