HEALTH TIPS

ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರಗಳ ಪಟ್ಟಿಯಿಂದ ಸಿರಿಯವನ್ನು ಕೈಬಿಟ್ಟ ಅಮೆರಿಕ

 ವಾಶಿಂಗ್ಟನ್: 'ಭಯೋತ್ಪಾದನೆಗೆ ಪ್ರಾಯೋಜನೆ ನೀಡುವ ರಾಷ್ಟ್ರಗಳ' ಪಟ್ಟಿಯಿಂದ ಸಿರಿಯವನ್ನು ತೆಗೆದುಹಾಕುವುದಾಗಿ ಅಮೆರಿಕವು ಬುಧವಾರ ಘೋಷಿಸಿದೆ. ಇದರೊಂದಿಗೆ ಆ ದೇಶವು ದಶಕಗಳಿಂದ ಎದುರಿಸುತ್ತಿದ್ದ ಆರ್ಥಿಕ ನಿರ್ಬಂಧಗಳು ಹಾಗೂ ಹೂಡಿಕೆ ಬಿಕ್ಕಟ್ಟುಗಳು ಅಂತ್ಯಗೊಂಡಂತಾಗಿದೆ. 


ಅಮೆರಿಕದ ಈ ನಿರ್ಣಾಯಕ ನಿರ್ಧಾರವು ಸಿರಿಯ ಅಧ್ಯಕ್ಷ ಅಹ್ಮದ್ ಅಲ್ ಶಾರಾ ಅವರ ನೂತನ ಸರಕಾರಕ್ಕೆ ಸಂಪೂರ್ಣ ಭರವಸೆಯನ್ನು ತುಂಬಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಭಯೋತ್ಪಾದಕ ಚಟುವಟಿಕೆಗಳಿಗೆ ಪದೇ ಪದೇ ಬೆಂಬಲವನ್ನು ನೀಡುವ ದೇಶಗಳನ್ನು ಅಮೆರಿಕವು ಈ ಪಟ್ಟಿಗೆ ಸೇರಿಸುತ್ತದೆ. ಸಿರಿಯ ಜನತೆಗೆ ನೂತನ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಟ್ರಂಪ್ ಅವರು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಹಾಗೂ ಸಿರಿಯ ಅಧ್ಯಕ್ಷ ಅಹ್ಮದ್ ಅಲ್ ಶಾರಾ ಅವರು ಬುಧವಾರ ತುರ್ಕಿಯದಲ್ಲಿ ನಡೆದ ನ್ಯಾಟೊ ಶೃಂಗಸಭೆಯ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ತನ್ನ ಮಾಮೂಲಿ ಸೇನಾಸಮವಸ್ತ್ರವನ್ನು ತೊರೆದು, ಸೂಟುಬೂಟು ಧಾರಿಯಾಗಿ ಅಲ್-ಶಾರಾ ಅವರು ಟ್ರಂಪ್‌ರನ್ನು ಭೇಟಿಯಾಗಿದ್ದರು. 2024ರಲ್ಲಿ ಅಸ್ಸಾದ್ ಆಡಳಿತದ ಪತನದ ಬಳಿ ಅಧಿಕಾರಕ್ಕೇರಿದ ಮಾಜಿ ಬಂಡುಕೋರ ನಾಯಕ ಅಲ್-ಶಾರಾ ಅವರು ಸಿರಿಯವನ್ನು ಒಗ್ಗೂಡಿಸುವಲ್ಲಿ ಅಸಾಧಾರಣವಾದ ಸಾಧನೆ ಮಾಡಿದ್ದಾರೆಂದು ಪ್ರಶಂಸಿದರು. ಅಸ್ಸಾದ್ ಆಳ್ವಿಕೆಯಲ್ಲಿ ಸಿರಿಯ ದೇಶವು ಪತನದ ಅಂಚಿನಲ್ಲಿತ್ತು ಎಂದವರು ಹೇಳಿದರು.

ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಸಿರಿಯ ಬೆಂಬಲಿಸುವುದಿಲ್ಲವೆಂಬ ಅಧ್ಯಕ್ಷ ಅಹ್ಮದ್ ಅಲ್ ಶಾರಾ ಅವರು ನೀಡಿರುವ ನಿರ್ದಿಷ್ಟ ಭರವಸೆಯನ್ನು ಆಧರಿಸಿ ಆ ದೇಶವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.

ಸಿರಿಯದ ಮೇಲಿನ ನಿರ್ಬಂಧಗಳ ರದ್ದತಿಯು ಆ ದೇಶದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆಯನ್ನು ಉತ್ತೇಜಿಸಲಿದೆ. ದೇಶವನ್ನು ಪುನರ್‌ನಿರ್ಮಿಸಲು ಇದು ನೆರವಾಗಲಿದೆ ಹಾಗೂ ಸಿರಿಯ ಜನತೆಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ'' ಎಂದವರು ಹೇಳಿದ್ದಾರೆ. ಸುಸ್ಥಿರ ಹಾಗೂ ಏಕೀಕೃತ ಸಿರಿಯವು ನೆರೆಹೊರೆಯ ರಾಷ್ಟ್ರಗಳ ಜೊತೆ ಶಾಂತಿಗೆ ಕಾರಣವಾಗಲಿದೆ. ಇದರಿಂದ ಇಡೀ ಪ್ರದೇಶಕ್ಕೆ ಮಾತ್ರವಲ್ಲದೆ ಜಗತ್ತಿನಾದ್ಯಂತ ದೇಶಗಳಿಗೂ ಒಳಿತಾಗಲಿದೆ ಎಂದು ರುಬಿಯೊ ಹೇಳಿದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries