ನವದೆಹಲಿ (PTI): ಮುಂದಿನ ವರ್ಷದಿಂದ ಕಂಪ್ಯೂಟರ್ ಮೂಲಕ ನಡೆಯಲಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ) 1,000ಕ್ಕೂ ಅಧಿಕ ಕೇಂದ್ರಗಳಲ್ಲಿ ಹಾಗೂ ಕನಿಷ್ಠ 6 ದಿನ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಕಾಲೇಜುಗಳ ಪ್ರವೇಶ ಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಪ್ರತಿ ವರ್ಷ 'ನೀಟ್' ನಡೆಸುತ್ತದೆ.
ನೀಟ್ ದೇಶದ ಅತಿದೊಡ್ಡ ಪಪವಿಪೂರ್ವ ಪ್ರವೇಶ ಪರೀಕ್ಷೆಯಾಗಿದ್ದು, ಸುಮಾರು 25 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಾರೆ.
'ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ ಪರೀಕ್ಷೆಯಂತೆ ನೀಟ್ ಕನಿಷ್ಠ 6 ದಿನ ನಡೆಯಲಿದೆ. ವಿಶ್ವಾಸಾರ್ಹತೆ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದ ಬಳಿಕವೇ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಲಾಗುವುದು' ಎಂದು ಮೂಲಗಳು ತಿಳಿಸಿವೆ.

