ಕುಂಬಳೆ: ಮಂಜೇಶ್ವರ ತಾಲೂಕಿನ ಕಳತ್ತೂರಿನಲ್ಲಿ ನಡೆದ 2080ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನಾಚರಣೆ ಭಾನುವಾರ ಜರುಗಿತು. ನಡೆಯಿತು. ಕಾರ್ಯಕ್ರಮವನ್ನು ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕುಡಿತದ ವ್ಯಸನದಿಂದ ಹೊರಬಂದು, ಹೊಸ ಜೀವನ ಕಂಡುಕೊಳ್ಳಲು ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಆಯೋಜಿಸುವ ಮದ್ಯವರ್ಜನ ಶಿಬಿರ ದೇಶಕ್ಕೆ ಮಾದರಿಯಾಗಿದೆ. ಮಾದಕ ದ್ರವ್ಯಗಳ ಬಳಕೆ ಆರೋಗ್ಯ, ಕುಟುಂಬ ವ್ಯವಸ್ಥೆಯನ್ನು ಹಾಳುಮಾಡುವುದರ ಜತೆಗೆ ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತಿದ್ದು, ಜನಜಾಗೃತಿ ಕಾರ್ಯಕ್ರಮಗಳಿಂದ ಇದಕ್ಕೆ ಮುಕ್ತಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಕುಡಿತ ಮಾಡಕ ವ್ಯಸನದಿಂದ ದೂರಾಗಿ ನವಜೀವನಕ್ಕೆ ಮರಳಿದ ಶಿಬಿರಾರ್ಥಿಗಳಿಗೆ ಪುನರ್ ವಿವಾಹ ಹಾಗೂ ಮಾತೃ ವಂದನಾ ಕಾರ್ಯಕ್ರಮ ನಡೆಸಲಾಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜಿ. ಎಸ್, ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯ ಸುಕೇಶ್ ಭಂಡಾರಿ, ಜನಜಾಗೃತಿ ವೇದಿಕೆ ಕಾಸರಗೋಡು ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕೆ.ಸಿ ಮೋಹನ್, ಸುರೇಶ್‍ಕುಮಾರ್ ಶೆಟ್ಟಿ ಪೂಕಟ್ಟೆ, ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ನಿಕಟಪೂರ್ವ ಅಧ್ಯಕ್ಷ ಅಭಿಲೇಶ್ ನಗುಮುಗಂ, ಉದಯ ಗಟ್ಟಿ ಕುಂಬಳೆ, ಜೀವನಾಥ್ ಜೋಡುಕಟ್ಟೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್‍ಬಾಗ್, ಹರೀಶ್ ಶೆಟ್ಟಿ ಕಡಂಬಾರು. ರಾಧಾಕೃಷ್ಣ ರೈ, ಶಿವರಾಮ್ ಭಟ್ ಕಾರಿಂಜ, ವಿದ್ಯಾ ಪೈ ಮಂಜೇಶ್ವರ, ಚಂದ್ರ ಕಾಜೂರು, ವಿನೋದ, ಶ್ರೀನಿವಾಸ ಅಳ್ವ ಕಳತ್ತೂರು, ಜಯಪ್ರಸಾದ್ ರೈ ಕಾರಿಂಜ, ಮಹೇಶ್ ಪುಣಿಯೂರು, ಜಯರಾಮ ಪಾಟಾಳಿ ಪಡುಮಲೆ ಮೊದಲಾದವರು ಉಪಸ್ಥಿತರಿದ್ದರು. .
ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ಸ್ವಾಗತಿಸಿದರು. ಕುಂಬಳೆ ವಲಯ ಮೇಲ್ವಿಚಾರಕರು ಅಭಿಷೇಕ್ ಡಿ ವಂದಿಸಿದರು.



