HEALTH TIPS

ಎನ್‍ಎಸ್‍ಎಸ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ತರಗತಿ

ಕಾಸರಗೋಡು: ತಾಲೂಕು ನಾಯರ್ಸ್ ಸರ್ವೀಸ್ ಸೊಸೈಟಿ(ಎನ್‍ಎಸ್‍ಎಸ್) ಕರಯೋಗಂ ಒಕ್ಕೂಟದ ಎನ್‍ಎಸ್‍ಎಸ್ ಮಾನವ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಎಸ್ಸೆಸೆಲ್ಸಿ ಮತ್ತು ಪ್ಲಸ್-2 ವಿದ್ಯಾರ್ಥಿಗಳಿಗಾಗಿ 'ಇಗ್ನೈಟ್-26' ಎಂಬ ಪ್ರೇರಣಾ ತರಗತಿ ಆಯೋಜಿಸಲಾಯಿತು.


ಕಣ್ಣೂರು ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ಸಿ.ಕೆ. ಸುನೀಲ್ ಕುಮಾರ್ ಪ್ರೇರಣಾ ತರಗತಿ ಉದ್ಘಾಟಿಸಿದರು. ಕರಯೋಗಂ ಒಕ್ಕೂಟದ ಅಧ್ಯಕ್ಷ ವಕೀಲ ಎ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಸುಭಾಷ್ ವನಶ್ರೀ ವ್ಯಕ್ತಿತ್ವ ವಿಕಸನದ ಕುರಿತು ತರಗತಿ ನಡೆಸಿದರು. ಕಾಸರಗೋಡು ಪೆÇಲೀಸ್ ಠಾಣೆಯ ಸೈಬರ್ ಅಪರಾಧ ವಿಭಾಗದ ಸಬ್-ಇನ್ಸ್‍ಪೆಕ್ಟರ್ ರವೀಂದ್ರನ್ ಮಡಿಕೈ ಸೈಬರ್ ಸುರಕ್ಷತೆಯ ಕುರಿತು ತರಗತಿ ನಡೆಸಿದರು. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕøತ ನಿರ್ಮಲ್ ಕುಮಾರ್ ಕಡಗಂ ಮಾಡರೇಟರ್ ಆಗಿ ಸಹಕರಿಸಿದರು. ಒಕ್ಕೂಟದ ಉಪಾಧ್ಯಕ್ಷ ಭಾಸ್ಕರನ್ ನಾಯರ್ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಸ್ಮಿತಾ ಬಾಲಕೃಷ್ಣನ್ ಉಪಸ್ಥಿತರಿದ್ದರು.  ಒಕ್ಕೂಟದ ಕಾರ್ಯದರ್ಶಿ ಇ. ಅರವಿಂದಾಕ್ಷನ್ ಸ್ವಾಗತಿಸಿದರು. ಅಬಕಾರಿ ಇನ್ಸ್‍ಪೆಕ್ಟರ್ ಟಿ. ಸುಧೀರ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries