HEALTH TIPS

ಬಾಲಗೋಕುಲಂ ಸತ್ಪ್ರಜೆಗಳ ಬೆಳೆಸುವ ಉದಾತ್ತ ಸಂಘಟನೆ- ಬಾಲಗೋಕುಲಂ ಉತ್ತರ ಕೇರಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಕೇಂದ್ರ ಸಚಿವ ಶ್ರೀಪಾದ ಯಸ್ಸೋನಾಯ್ಕ್ ಅಭಿಪ್ರಾಯ

ಕಾಸರಗೋಡು: ಬಾಲಗೋಕುಲಂ ಉತ್ತಮ ಪ್ರಜೆಗಳನ್ನು ರೂಪಿಸುವ ಒಂದು ಉದಾತ್ತ ಸಂಘಟನೆಯಾಗಿ ಬೆಳೆದುನಿಂತಿರುವುದಾಗಿ ಕೇಂದ್ರ  ಇಂಧನ ಖಾತೆರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ತಿಳಿಸಿದ್ದಾರೆ. 


ಅವರು ಬಾಲಗೋಕುಲಂ ಉತ್ತರ ಕೇರಳ ವಾರ್ಷಿಕ ಸಮ್ಮೇಳನದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೋದರತ್ವ ಮತ್ತು ಜಾಗತೀಕರಣದ ಭಾವನೆ ವೇಗವಾಗಿ ವಿಸ್ತರಣೆಗೊಳ್ಳುತ್ತಿರುವ ಯುಗದಲ್ಲಿ ನಾವಿಂದು ಬದುಕುತ್ತಿದ್ದೇವೆ. ಬಾಲಗೋಕುಲಂ ಭಾರತದ ಸಾಂಸ್ಕøತಿಕ ಮೌಲ್ಯಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.  ನಮ್ಮ ಮಕ್ಕಳು ಜಗತ್ತನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅಗತ್ಯ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕಾಘಿ ಬಾಲಗೋಕುಲದಂತಹ ಸಂಘಟನೆಗಳ ಚಟುವಟಿಕೆ ಮತ್ತಷ್ಟು ವಿಸ್ತಾರಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.   

ಬಾಲಗೋಕುಲಂ (ಉತ್ತರ ಕೇರಳ) ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಸ್ಕøತಿಯ ಪೋಷಣೆ ಹಾಗೂ ಸತ್ಪ್ರಜೆಗಳ ನಿರ್ಮಣದಿಂದ ದೇಶ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಬಾಲಗೋಕುಲಗಳಂತಹ ಸಂಘಟನೆಯಿಂದ ಸಾಮಾಜಿಕ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ನಿತ್ಯಾನಂದ ಯೋಗಾಶ್ರಮದ ಸ್ವಾಮಿ ಯೋಗಾನಂದ ಸರಸ್ವತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಿಂಊ ಸಮಾಜ ಸನಾತನ ಸಂಸ್ಕøತಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಗಬೇಕು. ಅಂಧಕಾರ ಹೋಗಲಾಡಿಸಿ, ಎಳೆಯ ಕ್ಕಳಲ್ಲಿ ಸಂಸ್ಕಾರ ಮೂಡಿಸುವ ಕೆಲಸ ಬಲಗೋಕುಲಂಗಳಿಂದ ನಡೆದುಬರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.  

ಸ್ವಾಗತ ಸಮಿತಿ ಅಧ್ಯಕ್ಷ ಸಿ.ವಿ. ಪೆÇದುವಾಳ್ ಸ್ವಾಗತಿಸಿದರು. ಸ್ವಾಗತ ಸಮಿತಿ ಕಾರ್ಯಧ್ಯಕ್ಷ ಪಿ.ಹರಿಶ್ಚಂದ್ರ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಎನ್.ಎಂ.ಸದಾನಂದನ್ ವಾರ್ಷಿಕ ವರದಿ ವಾಚಿಸಿದರು.,  ರಾಜೇಶ್ ಮವ್ವಾರ್ ವಂದಿಸಿದರು. ಬಾಲಸಂಸ್ಕಾರ ಕೇಂದ್ರದ ಅಧ್ಯಕ್ಷ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಪ್ರಾಂತ ಉಪಾಧ್ಯಕ್ಷ ವಿ.ಶ್ರೀಕುಮಾರ್ ಮಾಸ್ಟರ್ ಹಸ್ತಪತ್ರಿಕೆ ಫಲಿತಾಂಶ ಘೋಷಿಸಿದರು. ಆರ್.ಪ್ರಸನ್ನಕುಮಾರ್, ಪಿ.ಕೆ. ವಿಜಯರಾಘವನ್, ಆರ್.ವಿ.ಎನ್., ಮತ್ತಿತರರು ಮಾತನಾಡಿದರು. ಇದನ್ನು ಅನುಸರಿಸಿ...

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಯು.ಪ್ರಭಾಕರನ್ ಅಧ್ಯಕ್ಷ,  ವಿ.ಶ್ರೀಕುಮಾರ್, ಪಿ.ಎಂ. ಶ್ರೀಧರನ್, ಕೆ.ವಿ. ಕೃಷ್ಣನ್‍ಕುಟ್ಟಿ ಉಪಾಧ್ಯಕ್ಷರು, ವಿ.ಪ್ರಶೋಭ್ ಪ್ರಧಾನ ಕಾರ್ಯದರ್ಶಿ, ಎನ್.ವಿ.ಪ್ರಜಿತ್, ಟಿ.ಪ್ರವೀಣ್ ಕಾರ್ಯದರ್ಶಿಗಳು, ಎ. ರಾಧಾಕೃಷ್ಣನ್ ಕೋಶಾಧಿಕಾರಿ,  ಜಯಶ್ರೀ, ಗೋಪಿಕಾ ಶಾನ್ ಬಾಲಕಿಯರ ವಿಭಾಗದ ಉಸ್ತುವಾರಿಗಳು, ಕೆ.ಕೆ. ಸುಧಾ ಜತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries