HEALTH TIPS

ಜುಲೈ 20ರ ಪ್ರತಿಭಟನೆಯಲ್ಲಿ ಪ್ಲಾಸ್ಟಿಕ್ ಪೆಲೆಟ್ ಬಳಕೆ : ಪೊಲೀಸ್ ದಾಖಲೆಯಿಂದ ಸ್ಪಷ್ಟ

ವದೆಹಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜುಲೈ 20ರಂದು ಜಂತರ್ ಮಂತರ್ ಬಳಿ ನಡೆಸಲಾದ 'ಸಂಸತ್‌ ಚಲೋ' ಮೆರವಣಿಗೆ ಸಂದರ್ಭ ಪ್ರತಿಭಟನಕಾರರನ್ನು ಚದುರಿಸಲು ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಎರಡು ಸುತ್ತು ಪ್ಲಾಸ್ಟಿಕ್ ಪೆಲೆಟ್‌ಗಳು ಸೇರಿದಂತೆ ಹಲವು ಸುತ್ತು ಅಪಾಯ ರಹಿತ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದೆ ಎಂದು ಅಧಿಕೃತ ಪೊಲೀಸ್ ದಾಖಲೆ ಬಹಿರಂಗಪಡಿಸಿದೆ. 


ಜುಲೈ 22ರಂದು ಅಪರಾಹ್ನ 1.24ಕ್ಕೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತ ಮಾಹಿತಿ ದಾಖಲಾಗಿದೆ. ಈ ಮಾಹಿತಿಯ ಪ್ರಕಾರ, ಜಂತರ್ ಮಂತರ್ ಪ್ರದೇಶದ ವಲಯ-1ರಲ್ಲಿ ದಿಲ್ಲಿ ಪೊಲೀಸ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜೊತೆ ನಿಯೋಜನೆಗೊಂಡಿದ್ದ ಆರ್‌ಎಎಫ್‌ನ ಡೆಪ್ಯುಟಿ ಕಮಾಂಡೆಂಟ್ ಈ ಕ್ರಮದ ಬಗ್ಗೆ ವರದಿ ನೀಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಡಿಸಿಪಿ ಅವರ ನಿರ್ದೇಶನದಂತೆ ಕಾರ್ಯಪ್ರವೃತ್ತವಾದ ಆರ್‌ಎಎಫ್ ಕಾರ್ಯಾಚರಣೆ ಸಂದರ್ಭ 55 ಎಲೆಕ್ಟ್ರಿಕಲ್ ಅಲ್ಲದ ಶೆಲ್‌ಗಳು, 15 ಎಲೆಕ್ಟ್ರಿಕಲ್ ಶೆಲ್‌ಗಳು, ಐದು ಅಶ್ರುವಾಯು ಗ್ರೆನೇಡ್‌ಗಳು, ಗಲಭೆ ವಿರೋಧಿ ಬಂದೂಕುಗಳಿಂದ ಎರಡು ಸುತ್ತು ಹಾಗೂ ಪೆಲೆಟ್ ಗನ್‌ಗಳಿಂದ ಎರಡು ಸುತ್ತು ಪ್ಲಾಸ್ಟಿಕ್ ಪೆಲೆಟ್‌ಗಳನ್ನು ಪ್ರಯೋಗಿಸಿದೆ ಎಂದು ಪೊಲೀಸ್ ಠಾಣೆಯ ದಾಖಲೆಯನ್ನು ಅಧಿಕಾರಿಗಳು ಉಲ್ಲೇಖಿಸಿ ಹೇಳಿದ್ದಾರೆ.

ಪ್ರತಿಯೊಂದು ಸುತ್ತು ಅಪಾಯ ರಹಿತ ಪ್ಲಾಸ್ಟಿಕ್ ಪೆಲೆಟ್ ನಾಲ್ಕು ತುಂಡುಗಳನ್ನು ಹೊಂದಿರುತ್ತದೆ. ಇದು ದೇಹವನ್ನು ತೂರಿಕೊಂಡು ಹೋಗುವ ಲೋಹದ ಪೆಲೆಟ್‌ಗಳಿಗಿಂತ ಭಿನ್ನವಾಗಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟ್ಪಪಡಿಸಿದ್ದಾರೆ. ಈ ಪ್ಲಾಸ್ಟಿಕ್ ಪೆಲೆಟ್‌ಗಳನ್ನು ಕನಿಷ್ಠ ಹಾನಿ ಉಂಟು ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಭಟನಕಾರರ ಮೇಲಿನ ಪೊಲೀಸ್ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರಿಂದ ಹೇಳಿಕೆಯನ್ನು ಆಗ್ರಹಿಸುತ್ತಿರುವ ಮಧ್ಯೆಯೇ ಈ ಮಾಹಿತಿ ಹೊರಬಿದ್ದಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪೆಲೆಟ್ ಗುಂಡಿನಿಂದ ಇಬ್ಬರು ಮೂವರು ಪ್ರತಿಭಟನಕಾರರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ. 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries