HEALTH TIPS

ರಾಜ್ಯಸಭೆಯಲ್ಲಿ ಗದ್ದಲ, ಘೋಷಣೆ: ನಡೆಯದ ಕಲಾಪ

 ವದೆಹಲಿ: ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪೆಲೆಟ್ ಗನ್ ಬಳಸಿದ್ದರಿಂದ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಇದರಿಂದಾಗಿ ಯಾವುದೇ ಮಹತ್ವದ ಚರ್ಚೆ ನಡೆಯದೇ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. 

ಬೆಳಿಗ್ಗೆ 10 ನಿಮಿಷ ಹಾಗೂ ಏಳು ನಿಮಿಷಗಳ ಎರಡು ಅವಧಿಗೆ ಹಾಗೂ ಮಧ್ಯಾಹ್ನದ ಬಳಿಕ ಮೂರು ನಿಮಿಷಗಳ ಅವಧಿಗೆ ಮಾತ್ರ ಕಲಾಪ ನಡೆದರೂ, ಗದ್ದಲದ ನಡುವೆಯೇ ಮುಂದೂಡುವಂತಾಯಿತು. ಅಮಿತ್ ಶಾ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ ವಿಪಕ್ಷಗಳ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಕೃತ್ಯಕ್ಕೆ ಶಿಕ್ಷಿಸಲು ಅವಕಾಶ ನೀಡುವ, 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026'ನ್ನು ಅಂಗೀಕರಿಸುವ ಪ್ರಕ್ರಿಯೆಗೆ ವಿಪಕ್ಷಗಳು ಅನುವು ಮಾಡಿಕೊಡಲಿಲ್ಲ.

'ಗೃಹಸಚಿವರು ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಆದರೆ, ಅಮಿತ್ ಶಾ ಅವರ ನಿರಂತರ ಮೌನ ಮತ್ತು ರಾಜ್ಯಸಭೆಯಲ್ಲಿ ಅವರ ಅನುಪಸ್ಥಿತಿ ಕಾರಣಕ್ಕೆ ಎಂಎಸ್‌ಎಂಇ ಕುರಿತಾದ ಮಸೂದೆ ಮಂಡನೆಯ ಬಳಿಕ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಬೇಕಾಯಿತು' ಎಂದು ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.‌



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries