HEALTH TIPS

ಇರಾಕ್‌ ಮೇಲೆ ಅಮೆರಿಕ-ಸೌದಿ ಅರೇಬಿಯಾ ಜಂಟಿ ವಾಯುದಾಳಿ: ಪಿಎಂಎಫ್‌ನ 20 ಮಂದಿ ಸಾವು

 ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ಮೇಲೆ ಅಮೆರಿಕ ಮತ್ತು ಸೌದಿ ಅರೇಬಿಯಾ ಜಂಟಿ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆ.

ಇರಾಕ್‌ನ ಏಳು ಪ್ರಾಂತ್ಯಗಳಲ್ಲಿರುವ 'ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ ' (ಪಿಎಂಎಫ್) ಕೇಂದ್ರಗಳ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 20 ಮಂದಿ ಹತರಾಗಿದ್ದು, 32ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಿಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿಗೊಳಗಾದ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿರುವುದರಿಂದ ಮೃತರ ಸಂಖ್ಯೆ ಇನ್ಷೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇರಾಕ್‌ ಸುದ್ದಿ ಸಂಸ್ಥೆ 'ಐಎನ್‌ಎ' ಮಾಡಿದೆ.

ಬಾಗ್ದಾದ್, ವಾಸಿತ್, ನಿನೆವೆ, ಬಸ್ರಾ, ಕಿರ್ಕುಕ್, ಕರ್ಬಾಲಾ ಮತ್ತು ದಿಯಾಲಾ ಸೇರಿದಂತೆ ಒಟ್ಟು ಏಳು ಪ್ರಾಂತ್ಯಗಳಲ್ಲಿರುವ ಪಿಎಂಎಫ್‌ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸಂಘಟನೆಯ ಕಟ್ಟಡಗಳು, ವಾಹನಗಳು ಮತ್ತು ಮಿಲಿಟರಿ ಉಪಕರಣಗಳಿಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries