HEALTH TIPS

ಇನ್‌ಸ್ಟಾ ಪೋಸ್ಟ್‌ಗಳೇ ಇರಾನ್‌ಗೆ ಅಸ್ತ್ರ: ಸೈನಿಕರ ಫೋನ್‌ ವಶಕ್ಕೆ ಅಮೆರಿಕ ಚಿಂತನೆ

 ಅಮೆರಿಕದ ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಫೋಟೊ ಮತ್ತು ವಿಡಿಯೊಗಳು ಇರಾನ್‌ಗೆ ದಾಳಿಯ ಸುಳಿವು ನೀಡುತ್ತಿರುವ ಹಿನ್ನೆಲೆಯಲ್ಲಿ, ಮೊಬೈಲ್ ಬಳಕೆಯ ಮೇಲೆ ಕಠಿಣ ನಿರ್ಬಂಧ ಹೇರಲು ಅಮೆರಿಕ ಚಿಂತನೆ ನಡೆಸಿದೆ. 


ಸೈನಿಕರ ಪೋಸ್ಟ್‌ಗಳಿಂದ ಇರಾನ್‌ಗೆ ಸಿಗುವ ಲಾಭವೇನು?

ಸೈನಿಕರು ಹಂಚಿಕೊಳ್ಳುವ ಸಾಮಾನ್ಯ ವಿಡಿಯೊಗಳು ಮತ್ತು ಫೋಟೊಗಳ ಮೂಲಕ ಇರಾನ್ ತನ್ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಎಷ್ಟು ಯಶಸ್ವಿಯಾಗಿವೆ ಎಂದು ಅಂದಾಜಿಸಲು ಸಾಧ್ಯವಾಗುತ್ತಿದೆ.

ಅಮೆರಿಕ ಸೈನಿಕರ ಫೋನ್ ವಶಕ್ಕೆ ಪಡೆಯಲು ಕಾರಣಗಳೇನು?

ಯುದ್ಧದ ಕಾರ್ಯಾಚರಣೆಯ ಭದ್ರತೆಯನ್ನು ಕಾಪಾಡಲು ಮತ್ತು ಸೈನಿಕರ ಸ್ಥಳ, ಬಂಕರ್‌ಗಳ ಮಾಹಿತಿ ಶತ್ರುಗಳ ಕೈಗೆ ಸಿಗದಂತೆ ತಡೆಯಲು ಅಮೆರಿಕ ಈ ಕಠಿಣ ನಿರ್ಧಾರ ಕೈಗೊಳ್ಳುತ್ತಿದೆ.

ಸ್ಮಾರ್ಟ್ ಗ್ಲಾಸ್‌ಗಳ ದುರ್ಬಳಕೆ ಹೇಗೆ ನಡೆದಿದೆ?

ಜುಲೈ 17 ರಂದು ಜೋರ್ಡಾನ್ ವಾಯುನೆಲೆಯ ಮೇಲೆ ದಾಳಿ ನಡೆದಾಗ, ಸೈನಿಕರೊಬ್ಬರು 'ಮೆಟಾ ಸ್ಮಾರ್ಟ್ ಗ್ಲಾಸ್' ಬಳಸಿ ವಿಡಿಯೊ ತೆಗೆದು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದರು. ಇದು ಇರಾನ್‌ಗೆ ದಾಳಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನೆರವಾಯಿತು.

ಫೋನ್‌ಗಳನ್ನು ವಶಪಡಿಸಿಕೊಂಡರೆ, ಯುದ್ಧಭೂಮಿಯಲ್ಲಿರುವ ಸೈನಿಕರಿಗೆ ತಮ್ಮ ತಾಯ್ನಾಡಿನಲ್ಲಿರುವ ಕುಟುಂಬಸ್ಥರೊಂದಿಗೆ ಸಂಪರ್ಕ ಸಾಧಿಸಲು ಅಡಚಣೆಯಾಗಲಿದೆ.

ಈ ನಿರ್ಧಾರವು ಎಲ್ಲಿಯವರೆಗೆ ಅನ್ವಯವಾಗುತ್ತದೆ?

ಈಗಿನ ಚರ್ಚೆಯ ಪ್ರಕಾರ, ಕೇವಲ ಜೋರ್ಡಾನ್ ಅಷ್ಟೇ ಅಲ್ಲದೆ, ಇಡೀ ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕದ ಎಲ್ಲಾ ಸೈನಿಕರಿಗೂ ಈ ನಿಯಮ ಅನ್ವಯಿಸುವ ಸಾಧ್ಯತೆಯಿದೆ.

ಜುಲೈ 17ಘಟನೆ ನಡೆದ ದಿನಾಂಕ18ಸಂಘರ್ಷದಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ600ಗಾಯಗೊಂಡ ಸೈನಿಕರ ಸಂಖ್ಯೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಶತ್ರುಗಳಿಗೆ ಸಿಗುತ್ತಿರುವ ಸುಳಿವು:

ಸೈನಿಕರು 'ಸಾಮಾನ್ಯ' ಎಂದು ಭಾವಿಸಿ ಮಾಡುವ ಪೋಸ್ಟ್‌ಗಳಿಂದ, ಇರಾನ್ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಎಷ್ಟು ಯಶಸ್ವಿಯಾಗಿವೆ ಎಂಬುದನ್ನು ತಕ್ಷಣವೇ ಅಂದಾಜಿಸಲು ಸಾಧ್ಯವಾಗುತ್ತಿದೆ ಎಂದು 'ಯುಎಸ್ ಸೆಂಟ್ರಲ್ ಕಮಾಂಡ್' ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಎಚ್ಚರಿಸಿದ್ದಾರೆ.

ಫೋನ್ ವಶಕ್ಕೆ ನಿರ್ಧಾರ:

ಭದ್ರತಾ ಆತಂಕ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಆ ಭಾಗದಲ್ಲಿರುವ ಅಮೆರಿಕದ ಸೈನಿಕರಿಗೆ ತಮ್ಮ ಫೋನ್‌ಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಶೀಘ್ರದಲ್ಲೇ ಆದೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕದ ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿರುವ ವಿಡಿಯೊಗಳು ಮತ್ತು ಫೋಟೊಗಳು, ದೇಶದ (ಅಮೆರಿಕ) ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್‌ಗೆ ನೆರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೈನಿಕರ ಮೊಬೈಲ್ ಬಳಕೆಯ ಮೇಲೆ ಕಠಿಣ ನಿಯಂತ್ರಣ ಹೇರಲಾಗುತ್ತಿದೆ ಎಂದು ವರದಿಯಾಗಿದೆ.

'ಮೆಟಾ ಸ್ಮಾರ್ಟ್ ಗ್ಲಾಸ್' ದುರ್ಬಳಕೆ:

ಜುಲೈ 17 ರಂದು ಜೋರ್ಡಾನ್‌ನ 'ಮುಫಾಕ್ ಸಾಲ್ಟಿ' ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದಾಗ, ಅಮೆರಿಕದ ಸೈನಿಕರೊಬ್ಬರು 'ಮೆಟಾ ಸ್ಮಾರ್ಟ್ ಗ್ಲಾಸ್' ಬಳಸಿ ವಿಡಿಯೊ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದರು. ಸೈನಿಕರು ಬಂಕರ್‌ಗೆ ಓಡಿಹೋಗುವ ದೃಶ್ಯಗಳು ಇದರಲ್ಲಿದ್ದು, ಇದು ಇರಾನ್‌ಗೆ ಸುಳಿವು ನೀಡಿದೆ.

ಅಮೆರಿಕದ ಎಲೆಕ್ಟ್ರಾನಿಕ್ ಜ್ಯಾಮರ್‌ಗಳಿಂದಾಗಿ ಇರಾನ್‌ ಉಡಾಯಿಸಿದ ಕ್ಷಿಪಣಿಗಳು ನಿಗದಿತ ಜಾಗಕ್ಕೆ ಬಿದ್ದಿವೆಯೋ ಇಲ್ಲವೋ ಎಂಬುದು ಅದಕ್ಕೆ ತಕ್ಷಣ ತಿಳಿಯುವುದಿಲ್ಲ. ಆದರೆ, ಸೈನಿಕರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಮತ್ತು ಮಾಧ್ಯಮ ವರದಿಗಳು ಇರಾನ್‌ಗೆ ತಮ್ಮ ದಾಳಿಯ ನಿಖರತೆಯನ್ನು ಖಚಿತಪಡಿಸಲು ನೆರವಾಗಿವೆ ಎಂದು 'ಯುಎಸ್ ಸೆಂಟ್ರಲ್ ಕಮಾಂಡ್' ಅಡ್ಮಿರಲ್ ಬ್ರಾಡ್ ಕೂಪರ್ ಎಚ್ಚರಿಸಿದ್ದಾರೆ.

ದಾಳಿಯಿಂದ ಉಂಟಾದ ಹಾನಿಯ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾದರೆ, ಇರಾನ್ ಅದೇ ಸ್ಥಳವನ್ನು ಗುರಿಯಾಗಿಸಿಕೊಂಡು ಮತ್ತೆ ಭೀಕರವಾಗಿ ದಾಳಿ ನಡೆಸುವ ಅಪಾಯವಿದೆ. ಇದು ಅಮೆರಿಕ ಸೈನಿಕರ ಪ್ರಾಣಕ್ಕೇ ಕಂಟಕವಾಗಲಿದೆ ಎಂದು ಸೇನೆ ಆತಂಕ ವ್ಯಕ್ತಪಡಿಸಿದೆ.

ಫೋನ್ ನಿಷೇಧ ಕುರಿತು ಪರಿಶೀಲನೆ

ಇರಾನ್ ಪಡೆಗಳ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತುತ್ತಾಗುತ್ತಿರುವ ಜೋರ್ಡಾನ್‌ನಲ್ಲಿ ನೆಲೆಸಿರುವ ಅಮೆರಿಕದ ಸೈನಿಕರಿಗೆ ಮುಂಬರುವ ದಿನಗಳಲ್ಲಿ ಅವರ ಫೋನ್‌ಗಳನ್ನು ವಶಕ್ಕೆ ಪಡೆಯಬಹುದು ಅಥವಾ ಅಥವಾ ಬಳಕೆಯ ಮೇಲೆ ಕಠಿಣ ನಿರ್ಬಂಧ ಹೇರುವ ಬಗ್ಗೆ ಸುಳಿವು ನೀಡಲಾಗಿದೆ.

ಈ ನಿಯಮವನ್ನು ಕೇವಲ ಜೋರ್ಡಾನ್ ಮಾತ್ರವಲ್ಲದೆ, ಇಡೀ ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೂ ಅನ್ವಯಿಸುವ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಸೈನಿಕರ ಬಳಿಯಿಂದ ಫೋನ್‌ಗಳನ್ನು ವಶಕ್ಕೆ ಪಡೆದರೆ, ಯುದ್ಧಭೂಮಿಯಲ್ಲಿದ್ದುಕೊಂಡು ತಾಯ್ನಾಡಿನಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿರಲು, ತಮ್ಮ ಕ್ಷೇಮಸಮಾಚಾರ ತಿಳಿಸಲು ಮತ್ತು ಅವರಿಗೆ ಧೈರ್ಯ ತುಂಬಲು ಫೋನ್‌ಗಳನ್ನೇ ನೆಚ್ಚಿಕೊಂಡಿರುವ ಸಾವಿರಾರು ಸೈನಿಕರ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಕುರಿತು 'ರಾಯಿಟರ್ಸ್'ನೊಂದಿಗೆ ಮಾತಮನಾಡಿದ ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮೋತಿ ಹಾಕಿನ್ಸ್, 'ಈ ಸಂದೇಶವು ಕಾರ್ಯಾಚರಣೆಯ ಭದ್ರತೆಯನ್ನು ಕಾಯ್ದುಕೊಳ್ಳಲು ಸೈನಿಕರಿಗೆ ನೀಡಿದ ಒಂದು ಸಾಮಾನ್ಯ ಸಂದೇಶವಷ್ಟೆ. ಅಡ್ಮಿರಲ್ ಕೂಪರ್ ಅವರು ಸೇನೆಯ ಆದ್ಯತೆಗಳನ್ನು ತಿಳಿಸಲು ಬಳಸಿದ ಹಲವು ಮಾರ್ಗಗಳಲ್ಲಿ ಇದೂ ಒಂದು ಎಂದು' ಸ್ಪಷ್ಟಪಡಿಸಿದ್ದಾರೆ.

ಆತಂಕಕ್ಕೆ ಕಾರಣವಾದ ಇನ್‌ಸ್ಟಾಗ್ರಾಮ್ ಪೋಸ್ಟ್

ಜುಲೈ 17 ರಂದು ಜೋರ್ಡಾನ್‌ನ 'ಮುಫಾಕ್ ಸಾಲ್ಟಿ' ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದಾಗ, ಅಮೆರಿಕದ ಸೈನಿಕರೊಬ್ಬರು ತಮ್ಮ ಸಹೋದ್ಯೋಗಿಗಳು ಜೀವ ಉಳಿಸಿಕೊಳ್ಳಲು ಬಂಕರ್‌ಗಳತ್ತ ಓಡುತ್ತಿರುವುದನ್ನು ವಿಡಿಯೊ ರೆಕಾರ್ಡ್ ಮಾಡಿದ್ದರು. 'ಮೆಟಾ ಸ್ಮಾರ್ಟ್ ಗ್ಲಾಸ್' ಬಳಸಿ ರೆಕಾರ್ಡ್ ಮಾಡಿದ್ದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಲಾಗಿತ್ತು.

ದಾಳಿಯ ಸಮಯದಲ್ಲಿ ಸೈನಿಕರು ಎಲ್ಲಿಗೆ ಮತ್ತು ಹೇಗೆ ಬಂಕರ್‌ಗಳಿಗೆ ಓಡಿ ಅಡಗಿಕೊಂಡರು ಎಂಬುದನ್ನು ಆ ವಿಡಿಯೊ ಸ್ಪಷ್ಟವಾಗಿ ತೋರಿಸುತ್ತಿತ್ತು. ಇಂತಹ ಪೋಸ್ಟ್‌ಗಳು ಸೈನಿಕರು ಊಹಿಸುವುದಕ್ಕಿಂತಲೂ ಹೆಚ್ಚಿನ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ ಎಂದು ಅಡ್ಮಿರಲ್ ಎಚ್ಚರಿಸಿದ್ದಾರೆ.

ಇರಾನ್‌ಗೆ ಉಚಿತವಾಗಿ ಸಿಗುತ್ತಿರುವ ಗುಪ್ತಚರ ಮಾಹಿತಿ

ಅಮೆರಿಕದ ಪಡೆಗಳು ಎಲೆಕ್ಟ್ರಾನಿಕ್ ಜ್ಯಾಮಿಂಗ್ ಹಾಗೂ ಇತರ ತಂತ್ರಗಳನ್ನು ಬಳಸುವುದರಿಂದ, ತಾವು ಉಡಾಸಿದ ಕ್ಷಿಪಣಿಗಳು ನಿಗಧಿತ ಗುರಿಗೆ ತಲುಪಿವೆಯೋ ಎಂಬುದನ್ನು ತಕ್ಷಣವೇ ತಿಳಿದುಕೊಳ್ಳಲು ಇರಾನ್‌ಗೆ ಯಾವುದೇ ಮಾರ್ಗವಿರುವುದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಮಾಧ್ಯಮಗಳಲ್ಲಿ ಬರುವ ವಿವರವಾದ ವರದಿಗಳು ಇರಾನ್‌ಗೆ ಬೇಕಾದ ಎಲ್ಲಾ ಮಾಹಿತಿಯನ್ನು ಉಚಿತವಾಗಿ ಒದಗಿಸುತ್ತಿವೆ.

ತಾವು ಅಸ್ತ್ರಗಳನ್ನು ಪ್ರಯೋಗಿಸಿದ್ದೇವೆ ಎಂಬುದಷ್ಟೇ ಇರಾನ್‌ಗೆ ತಿಳಿದಿರುತ್ತದೆ. ಆದರೆ ಅವು 50 ಮೀಟರ್ ದೂರದಲ್ಲಿ ಬಿದ್ದವೋ, ಖಾಲಿ ಜಾಗಕ್ಕೆ ಬಿದ್ದವೋ ಅಥವಾ ಜನರಿರುವ ಕಟ್ಟಡಕ್ಕೇ ನೇರವಾಗಿ ಅಪ್ಪಳಿಸಿದವೋ ಎಂಬುದು ಅವರಿಗೆ ತಕ್ಷಣಕ್ಕೆ ತಿಳಿದಿರುವುದಿಲ್ಲ.

ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪೋಸ್ಟರ್‌ಗಳು ಇರಾನ್‌ಗೆ ತಮ್ಮ ದಾಳಿಯ ಹಾನಿಯನ್ನು ಅಳೆಯಲು 'ಉಚಿತ ಗೂಢಚರ್ಯೆ'ಯಂತೆ ಕೆಲಸ ಮಾಡುತ್ತಿವೆ.

ಈ ರೀತಿ ಬಹಿರಂಗವಾಗಿ ಲಭ್ಯವಾಗುವ ಮಾಹಿತಿಯ ಅಮೆರಿಕದ ಸೈನಿಕರು ಮತ್ತು ಗಲ್ಫ್ ದೇಶಗಳ ನಾಗರಿಕರ ಪ್ರಾಣಕ್ಕೆ ಅಪಾಯ ತರಬಹುದು. ಹಾಗಾಗಿ ಸೇನಾ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೂಪರ್ ಹೇಳಿದ್ದಾರೆ.

ಮತ್ತಷ್ಟು ಭೀಕರ ದಾಳಿಗಳ ಆತಂಕ

ದಾಳಿಯಿಂದ ಎಷ್ಟು ಹಾನಿಯಾಗಿದೆ ಎಂಬ ನಿಖರ ಮಾಹಿತಿ ಸಿಕ್ಕರೆ, ಇರಾನ್ ಅದೇ ಜಾಗವನ್ನು ಮತ್ತಷ್ಟು ನಿಖರವಾಗಿ ಗುರಿಯಾಗಿಸಿಕೊಂಡು ಎರಡನೇ ಹಂತದ ಭೀಕರ ದಾಳಿ ನಡೆಸಲು ಯೋಜಿಸಬಹುದು ಎಂದು ಕೂಪರ್ ಆತಂಕ ವ್ಯಕ್ತಪಡಿಸಿದ್ದಾರೆ.

ಫೆ.28 ರಂದು ಆರಂಭವಾದ ಅಮೆರಿಕ ಮತ್ತು ಇರಾನ್ ನಡುವಿನ ಈ ಸಂಘರ್ಷದಲ್ಲಿ ಈಗಾಗಲೇ 18 ಸೈನಿಕರು ಪ್ರಾಣ ಕಳೆದುಕೊಂಡಿದ್ದು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೈನಿಕರ ಸಾವು-ನೋವು ಹೆಚ್ಚಾಗುತ್ತಿರುವುದು ಅಮೆರಿಕದ ಜನರಲ್ಲಿ ಆತಂಕ ಹೆಚ್ಚಿಸಿದೆ.

ಪ್ರತಿ ಮೂವರು ಅಮೆರಿಕನ್ನರಲ್ಲಿ ಒಬ್ಬರು ಮಾತ್ರ ಈ ಯುದ್ಧವನ್ನು ಬೆಂಬಲಿಸುತ್ತಿದ್ದಾರೆ. ಇತ್ತ ಡೆಮಾಕ್ರಟಿಕ್ ಪಕ್ಷದ ಸಂಸದರು, ಅಮೆರಿಕದ ಸೇನಾ ನೆಲೆಗಳಿಗೆ ಆಗಿರುವ ಹಾನಿಯ ಬಗ್ಗೆ ನೈಜ ವಿವರಗಳನ್ನು ಬಹಿರಂಗಪಡಿಸುವಂತೆ ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ) ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

ತಾಂತ್ರಿಕ ಅಪಾಯ

ಸ್ಮಾರ್ಟ್‌ಫೋನ್‌ಗಳಲ್ಲಿರುವ ಲೊಕೇಶನ್ ಟ್ರ್ಯಾಕಿಂಗ್ ಆಯಪ್‌ಗಳು ಮತ್ತು ಇತರ ಡೇಟಾಗಳು ಶತ್ರುಗಳಿಗೆ ಸೈನಿಕರ ಇರುವಿಕೆಯನ್ನು ಸುಲಭವಾಗಿ ತೋರಿಸಿಕೊಡಬಲ್ಲವು ಎಂದು ಪೆಂಟಗನ್ ಮೊದಲಿನಿಂದಲೂ ಎಚ್ಚರಿಸುತ್ತಲೇ ಬಂದಿದೆ. ಮೊಬೈಲ್ ಸಾಧನಗಳಿಂದ ಸಂಗ್ರಹಿಸಿದ ಸ್ಥಳದ ಮಾಹಿತಿಯನ್ನು ಬಳಸಿ ಅಮೆರಿಕದ ಪಡೆಗಳ ಮೇಲೆ ನಿಗಾ ಇಡಲು ಮತ್ತು ಗುರಿಯಾಗಿಸಲು ಈಗಾಗಲೇ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries