ಮುಝಾಫರ್‌ಪುರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ಪ್ರತಿಭಟನೆ ಕ್ಷೀಣಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪಾಕ್ ಸರಕಾರದ ಅಧಿಕಾರಿಗಳ ಜೊತೆ ಯಾವುದೇ ಶಾಂತಿ ಮಾತುಕತೆ ನಡೆಸುವ ಸಾಧ್ಯತೆಯನ್ನು ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ತಳ್ಳಿಹಾಕಿದೆ ಹಾಗೂ ಪಾಕ್ ಅಧಿಕಾರಿಗಳ ಜೊತೆ ಮಾತುಕತೆಗಳನ್ನು ನಡೆಸುವ ಸಾಧ್ಯತೆಯನ್ನು ಹಾಕಿದೆ ಹಾಗೂ ಮುಂಬರುವ ದಿನಗಳಲ್ಲಿ ಹೊಸ ಸುತ್ತಿನ ಮಾತುಕತೆಗಳನ್ನು ನಡೆಸುವುದಾಗಿ ಘೋಷಿಸಿದೆ.
ಪಿಓಕೆ ಪ್ರತಿಭಟನಕಾರರು ಹಾಗೂ ಪಾಕ್ ಸರಕಾರದ ನಡುವೆ ಸಂಧಾನ ನಡೆದಿದೆಯೆಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೊಂದು ಆಧಾರರಹಿತ ಪ್ರಚಾರವೆಂದು ಜೆಎಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಧಿಕಾರಿಗಳ ಜೊತೆ ಮಾತುಕತೆಗಳು ಮುಂದುವರಿದಿವೆಯಾದರೂ, ಈ ತನಕ ಯಾವುದೇ ಒಪ್ಪಂದವೇರ್ಪಟ್ಟಿಲ್ಲವೆಂದು ಅದು ತಿಳಿಸಿದೆ.
ಜುಲೈ 23ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಂಘಟಿತರಾಗಿರುವಂತೆ ಜೆಎಎಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಚಳವಳಿಯ ಪಾಲಿಗೆ ಅದೊಂದು ಅತ್ಯಂತ ಮಹತ್ವದ ದಿನವಾಗಲಿದೆಯೆಂದು ಹೇಳಿದೆ. ಅಂದು ನಡೆಯುವ ಪ್ರತಿಭಟನೆ ಹಾಗೂ ಧರಣಿಯಲ್ಲಿ ಭಾರೀ ಸಂಖ್ಯೆಯಲ್ಲಿ ಪಿಓಕೆ ಜನತೆ ಪಾಲ್ಗೊಳ್ಳಬೇಕಂದು ಅದು ಕರೆ ನೀಡಿದೆ.
ಪಿಓಕೆ ಪ್ರದೇಶದ ಎಲ್ಲಾ ವರ್ತಕರು ಅಂಗಡಿಮುಂಗಟ್ಟೆ, ಮಾರುಕಟ್ಟೆಗಳನ್ನು ಮುಚ್ಚಬೇಕೆಂದು ಪ್ರತಿಭಟನೆಗೆ ನೀಡಿದ ಕರೆಯನ್ನು ಬೆಂಬಲಿಸಬೇಕೆಂದು ಜೆಎಎಸಿ ತಿಳಿಸಿದೆ.
ಈ ಮಧ್ಯೆ ಬಂಧನದಲ್ಲಿರುವ ತನ್ನ ಕಾರ್ಯಕರ್ತ ಶೋಕತ್ ನವಾಝ್ ಮಿರ್‌ನ ಬಿಡುಗಡೆಗೆ ಆಗ್ರಹಿಸಿ ಸೆಂಟ್ರಲ್ ಅಂಜುಮಾನ್ ತಾಜಿರಾನ್ ಮುಝಫ್ಫರಬಾಬಾದ್ ಸಂಘಟನೆಯು ಬುಧವಾ ಕರೆ ನೀಡಿರುವ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿದೆ. ಬಂಧಿತ ನಾಯಕರ ಬಿಡುಗಡೆ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆಯೆಂದು ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಸಂಘಟನೆಗಳು ಘೋಷಿಸಿವೆ.

