HEALTH TIPS

ದೇಶದ ಶೇ 45ರಷ್ಟು ಮುಖ್ಯಮಂತ್ರಿಗಳ ಮೇಲೆ ಕ್ರಿಮಿನಲ್ ಪ್ರಕರಣ

 ನವದೆಹಲಿ: ದೇಶದ 31 ಮುಖ್ಯಮಂತ್ರಿಗಳಲ್ಲಿ 14 ಮಂದಿ (ಶೇ 45) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದು, ಅವರಲ್ಲಿ 11 ಮಂದಿ (ಶೇ 35) ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ಬಿಡುಗಡೆ ಮಾಡಿದ ವರದಿ ತಿಳಿಸಿದೆ.


28 ರಾಜ್ಯಗಳ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಇತ್ತಿಚೆಗೆ ತಾವು ಸ್ಪರ್ಧಿಸಿರುವ ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್‌ಗಳಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ.

ಗಂಭೀರ ಆರೋಪ

ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ 11 ಮುಖ್ಯಮಂತ್ರಿಗಳ ಮೇಲೆ ಹಲ್ಲೆ, ಕೊಲೆ, ಅಪಹರಣ, ಮಹಿಳೆಯರ ವಿರುದ್ಧ ಅಪರಾಧ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ‍ಸೇರಿ ಹಲವು ಜಾಮೀನು ರಹಿತ ಪ್ರಕರಣಗಳಿವೆ.

ಎರಡು ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕೊಲೆ ಯತ್ನ ಪ್ರಕರಣ ಇದೆ ಎಂದು ಹೇಳಿಕೊಂಡಿದ್ದಾರೆ.

ಜನರ ಕಲ್ಯಾಣಕ್ಕಾಗಿ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ: ಡಿಕೆಶಿ

ಸರಾಸರಿ ಆಸ್ತಿ ₹ 118 ಕೋಟಿ

31 ಮುಖ್ಯಮಂತ್ರಿಗಳ ಸರಾಸರಿ ಘೋಷಿತ ಆದಾಯ ₹ 118.07 ಕೋಟಿ. ವರದಿಯ ಪ್ರಕಾರ 4 ಮುಖ್ಯಮಂತ್ರಿಗಳು (ಶೇ 13) ತಮ್ಮ ಆಸ್ತಿ ₹ 100 ಕೋಟಿಗೂ ಅಧಿಕ ಎಂದು ಘೋಷಿಸಿಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್ ಶ್ರೀಮಂತ ಮುಖ್ಯಮಂತ್ರಿ

ಕರ್ನಾಟಕ ಸಿ.ಎಂ. ಡಿ.ಕೆ. ಶಿವಕುಮಾರ್ ಅವರು ಅತ್ಯಂತ್ಯ ಶ್ರೀಮಂತ ಮುಖ್ಯಮಂತ್ರಿ. ಅವರ ಘೋಷಿತ ಆದಾಯ ₹ 1,413 ಕೋಟಿ.

₹931 ಕೋಟಿ ಆದಾಯ ಇರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎರಡನೇ ಸ್ಥಾನದಲ್ಲಿ ಇದ್ದರೆ, ಬಳಿಕದ ಸ್ಥಾನದಲ್ಲಿ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ (₹ 648 ಕೋಟಿ), ಅರುಣಾಚಾಲದ ಪೇಮಾ ಖಂಡು (₹ 332 ಕೋಟಿ) ಇದ್ದಾರೆ.

ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರು ₹55.24 ಲಕ್ಷ ಘೋಷಿತ ಆಸ್ತಿಯೊಂದಿಗೆ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ. ಅವರ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧೀಕಾರಿ (₹85.87 ಲಕ್ಷ) ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ (₹1.46 ಕೋಟಿ) ಇದ್ದಾರೆ.

ಡೀಪ್‌ಸೀಕ್‌ ಅಇಔ ಲಿಯಾಂಗ್ ಜಗತ್ತಿನ ಅತ್ಯಂತ ಶ್ರೀಮಂತ ಂI ಸ್ಟಾರ್ಟ್‌ಅಪ್‌ ಸ್ಥಾಪಕ

ವಿದ್ಯಾರ್ಹತೆ

ವರದಿ ಪ್ರಕಾರ, ಒಟ್ಟು ಮುಖ್ಯಮಂತ್ರಿಗಳ ಪೈಕಿ ಶೇ 29 ಮಂದಿ ಸ್ನಾತಕೋತ್ತರ ಪದವೀಧರರು. ಶೇ 23 ಪದವೀಧರರು. ಶೇ 19 ವೃತ್ತಿಪರ ಪದವೀಧರರು, ಶೇ 10 ಡಾಕ್ಟರೇಟ್ ಪಡೆದವರು ಇದ್ದಾರೆ. ಉಳಿದವರು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಮಟ್ಟದ ವಿದ್ಯಾರ್ಹತೆ ಹೊಂದಿದ್ದಾರೆ.

ದೆಹಲಿಯ ರೇಖಾ ಗುಪ್ತಾ ಅವರು ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries