ನವದೆಹಲಿ: ಲೋಕಸಭೆಯ ಕಲಾಪದ ವೇಳೆ ವಿರೋಧ ಪಕ್ಷದ ಸಂಸದರು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ಅಯೋಧ್ಯೆ ರಾಮಮಂದಿರದ ದೇಣಿಗೆ ಖಂಡಿಸಿ, ಜುಲೈ 30 ರಂದು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, 'ಕಾಣಿಕೆ ಕಳ್ಳರು', 'ಗೃಹ ಸಚಿವರೇ ಸದನಕ್ಕೆ ಬನ್ನಿ', 'ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಆದೇಶ ಕೊಟ್ಟವರು ಯಾರು? ಉತ್ತರ ನೀಡಿ' ಎಂದು ಆಗ್ರಹಿಸಿದ್ದರು.
ಇದೇ ವೇಳೆ ಸಂಸತ್ತಿನ ಆವರಣದ ಎದುರು ಸಂಸದರೊಬ್ಬರು ಹುಂಡಿಯನ್ನು ಇಟ್ಟು ಕಾಣಿಕೆ ಹಾಕುವ ಮೂಲಕ ಸರ್ಕಾರವನ್ನು ಟೀಕೆ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಗಾಂಧಿ ಜತೆ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಸೇರಿ ಹಲವರು ಭಾಗಿಯಾಗಿದ್ದರು.

