HEALTH TIPS

ಬಂಗಾಳ ಕೊಲ್ಲಿಯಲ್ಲಿ 4.5 ತೀವ್ರತೆಯ ಭೂಕಂಪನ: ವಿಶಾಖಪಟ್ಟಣಂನಲ್ಲಿ ಕಂಪಿಸಿದ ಭೂಮಿ

 ವಿಶಾಖಪಟ್ಟಣಂ: ಬಂಗಾಳ ಕೊಲ್ಲಿಯಲ್ಲಿ 4.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರಿಂದಾಗಿ ವಿಶಾಖಪಟ್ಟಣಂನಲ್ಲಿ ಸಾಧಾರಣ ಕಂಪನದ ಅನುಭವವಾಗಿದೆ ಎಂದು ರವಿವಾರ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ತಿಳಿಸಿದೆ.


ರವಿವಾರ ಮುಂಜಾನೆ ಭೂಕಂಪನ ಸಂಭವಿಸಿದ್ದು, ಬಂಗಾಳ ಕೊಲ್ಲಿಯ ಕಾಕಿನಾಡ ಕರಾವಳಿಯಿಂದ 225 ಕಿಮೀ ದೂರದಲ್ಲಿ ಮತ್ತು 10 ಕಿಮೀ ಆಳದಲ್ಲಿ ಹಾಗೂ 16.805 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 84.381 ಡಿಗ್ರಿ ಪೂರ್ವ ರೇಖಾಂಶದಲ್ಲಿ ಈ ಭೂಕಂಪನ ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.

"ರವಿವಾರ ಮುಂಜಾನೆ ಬಂಗಾಳ ಕೊಲ್ಲಿಯಲ್ಲಿ 4.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ವಿಶಾಖಪಟ್ಟಣಂ ನಗರದ ಹಲವು ಭಾಗಗಳಲ್ಲಿ ಸಾಧಾರಣ ಕಂಪನದ ಅನುಭವವಾಗಿದೆ. ಈ ಭೂಕಂಪನದಲ್ಲಿ ಯಾವುದೇ ಪ್ರಾಣಾಪಾಯ, ಆಸ್ತಿಪಾಸ್ತಿಗಳಿಗೆ ಹಾನಿ ಅಥವಾ ಇನ್ನಿತರ ಯಾವುದೇ ನಷ್ಟ ವರದಿಯಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries