ನವದೆಹಲಿ: ಕೊಳೆತ ಹಾಗೂ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಪೂರೈಕೆ ಮಾಡಿರುವುದು ಸೇರಿದಂತೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ವಿರುದ್ಧ ಗ್ರಾಹಕರಿಂದ ಬಂದಿರುವ ಹಲವು ದೂರುಗಳನ್ನು ಆಧರಿಸಿ ಒಂಬತ್ತು ನೋಟಿಸ್‌ಗಳನ್ನು ಜಾರಿಮಾಡಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
ಕೊಳೆತ, ಹಾಳಾದ, ಅವಧಿ ಮುಗಿದಿರುವ, ಕಲುಷಿತಗೊಂಡಿರುವಹಾಗೂ ಸುರಕ್ಷಿತವಲ್ಲದ ಆಹಾರ ವಸ್ತುಗಳ ಪೂರೈಕೆಯು ಸ್ವಿಗ್ಗಿ ಇನ್ ಸ್ಟಾಮಾರ್ಟ್‌ನಿಂದ ಆಗಿದೆ ಎಂಬ ಹಲವು ದೂರುಗಳು ಗ್ರಾಹಕರಿಂದ ಬಂದಿವೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.
ವಿಸ್ತೃತವಾದ ವಿವರಣೆ ಒದಗಿಸುವಂತೆ ಹಾಗೂ ಲೋಪಗಳನ್ನು ತಿದ್ದಿಕೊಂಡಿರುವುದರ ಬಗ್ಗೆ ಮಾಹಿತಿ ಒದಗಿಸುವಂತೆ ಕಂಪನಿಗೆ ಪ್ರಾಧಿಕಾರ ತಿಳಿಸಿದೆ. ಈ ಕೆಲಸ ಮಾಡದೆ ಇದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
'ಎಫ್‌ಎಸ್‌ಎಸ್‌ಎಐ ನಮ್ಮ ಗಮನಕ್ಕೆ ತಂದಿರುವ ಸಂಗತಿಗಳನ್ನು ಪರಿಶೀಲಿಸು ತ್ತಿದ್ದೇವೆ. ಸಮಸ್ಯೆ ಇತ್ಯರ್ಥಪಡಿಸಲು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ದ್ದೇವೆ' ಎಂದು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ವಕ್ತಾರರು ತಿಳಿಸಿದ್ದಾರೆ.
ಹಾಳಾಗಿರುವ ಮೊಟ್ಟೆಗಳು ಮತ್ತು ಹಾಲು, ಹಾಳಾಗಿರುವ ಆಹಾರ ವಸ್ತು ಗಳನ್ನು ಇನ್‌ಸ್ಟಾಮಾರ್ಟ್ ಮೂಲಕ ಮಾರಾಟ ಮಾಡಲಾಗಿದೆ ಎಂಬ ದೂರುಇವೆ ಎಂದು ಎಫ್‌ಎಸ್‌ಎಸ್‌ಎಐಹೇಳಿದೆ.
ಕಂಪನಿಯ ಕಡೆಯಿಂದ ತೃಪ್ತಿಕರ ಉತ್ತರ ಸಿಕ್ಕಿಲ್ಲ, ದೂರುಗಳನ್ನು ಸರಿ ಯಾಗಿ ಇತ್ಯರ್ಥಪಡಿಸಿಲ್ಲ ಮತ್ತು ಲೋಪ ಗಳನ್ನು ಸರಿಪಡಿಸಿಕೊಳ್ಳುವ ಕೆಲಸ ಆಗಿಲ್ಲ ಎಂದು ಕೂಡ ಕೆಲವರು ಗ್ರಾಹಕರು ಹೇಳಿದ್ದಾರೆ. ಆಹಾರದ ಸುರಕ್ಷತೆಗೆ ಸಂಬಂಧಿಸಿದ ಕಳವಳಕ್ಕೆ ಸ್ಪಂದಿಸುವ ಕೆಲಸ ಮಾಡದೆ, ಹಣವನ್ನು ಮಾತ್ರ ಮರಳಿಸುವ ಕೆಲಸ ಆಗಿದೆ ಎಂದೂ ಗ್ರಾಹಕರೊಬ್ಬರು ಹೇಳಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.

