HEALTH TIPS

1.7 ಕೋಟಿ ಐಟಿಆರ್ ಸಲ್ಲಿಕೆ

 ನವದೆಹಲಿ (PTI): 2026-27ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ 1.7 ಕೋಟಿಗೂ ಹೆಚ್ಚು ತೆರಿಗೆದಾರರು ಆದಾಯ ತೆರಿಗೆ ವಿವರ (ಐಟಿಆರ್‌) ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.


2025-26ರ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆದಾರರು ಐಟಿಆರ್ 1 ಮತ್ತು ಐಟಿಆರ್ 2 ಸಲ್ಲಿಸಬೇಕಿದ್ದು, ಸಲ್ಲಿಕೆಗೆ ಜುಲೈ 31 ಕೊನೆಯ ದಿನ.

ಶುಕ್ರವಾರ ಒಂದೇ ದಿನ 10 ಲಕ್ಷಕ್ಕೂ ಅಧಿಕ ತೆರಿಗೆದಾರರು ಐಟಿಆರ್ ಸಲ್ಲಿಸಿದ್ದಾರೆ ಎಂದು ಇಲಾಖೆಯು 'ಎಕ್ಸ್‌'ನಲ್ಲಿ ತಿಳಿಸಿದೆ.

ವಾರ್ಷಿಕ ₹50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದವರು, ಒಂದು ಮನೆ, ಬಡ್ಡಿ ಸೇರಿದಂತೆ ಇತರೆ ವರಮಾನ ಮತ್ತು ₹5 ಸಾವಿರದವರೆಗೆ ಕೃಷಿ ಆದಾಯ ಹೊಂದಿದವರು ಐಟಿಆರ್‌-1 ಸಲ್ಲಿಸಬೇಕಿದೆ. ಐಟಿಆರ್-2 ನಮೂನೆಯನ್ನು ಉದ್ದಿಮೆ ವಹಿವಾಟು ಅಥವಾ ವೃತ್ತಿಯಿಂದ ಆದಾಯ ಹೊಂದಿರದ ಹಾಗೂ ಬಂಡವಾಳ ವೃದ್ದಿಯಿಂದ ಆದಾಯ ಪಡೆದಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು ಭರ್ತಿ ಮಾಡಬೇಕಾಗುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries