HEALTH TIPS

46 ನೇ ವರ್ಷದ ಮಂಜೇಶ್ವರ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ಮುಹೂರ್ತ

ಮಂಜೇಶ್ವರ: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಈ ಬಾರಿ ಜರಗಲಿರುವ 46 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ಮುಹೂರ್ತ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿದಾನಗಳೊಂದಿಗೆ ನಡೆಯಿತು. 


ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಯಾದವ ಬಡಾಜೆ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ತೂಮಿನಾಡು, ಕೋಶಾಧಿಕಾರಿ ಅಶೋಕ್ ದೇವಾಡಿಗ ಕುಚ್ಚಿಕಾಡ್, ಪ್ರಧಾನ ಸಂಚಾಲಕ, ಕ್ಷೇತ್ರದ ಅಧ್ಯಕ್ಷ ನವೀನ್ ರಾಜ್ ಕೆ.ಜೆ, ಪದ್ಮನಾಭ ಕಡಪ್ಪರ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಅವಿನಾಶ್ ಹೆಗ್ಡೆ, ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಪ್ರಧಾನ ಅರ್ಚಕ ತಿರುಮಲೇಶ್ ಆಚಾರ್ಯ ಹೊಸಂಗಡಿ, ವಿಗ್ರಹ ಸೇವಾ ಕರ್ತೃ ಕಿರಣ್ ಶೆಟ್ಟಿ ಉದ್ಯಾವರ ಮಾಡ, ಸಮಿತಿ ಪದಾಧಿಕಾರಿಗಳಾದ ದಿನಕರ ಬಿ.ಎಂ, ರಮೇಶ್ ಹೊಸಂಗಡಿ, ಶಿವಪ್ರಸಾದ್ ಪೆಲಪ್ಪಾಡಿ, ಚಂದ್ರಹಾಸ ಪೆಲಪ್ಪಾಡಿ, ನವೀನ್ ಅಡಪ್ಪ ಹೊಸಬೆಟ್ಟು, ಅಖಿಲೇಶ್ ಹೊಸಂಗಡಿ, ಶಿವ ಪ್ರಸಾದ್ ರಾವ್ ಕಟ್ಟೆಬಜಾರ್, ಮೋಹನ್ ದಾಸ್ ಸುಂಕದಕಟ್ಟೆ, ಹರಿಶ್ಚಂದ್ರ ಮಂಜೇಶ್ವರ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಂ.ಎಸ್, ಕೋಶಾಧಿಕಾರಿ ಸುನಿಲ್ ಕುಮಾರ್ ಗಾಣಿಗ ಮೊದಲಾದವರು ಪಾಲ್ಗೊಂಡರು. ವಿಗ್ರಹ ರಚಣೆಯನ್ನು ಶಿಲ್ಪಿ ಮಹೇಶ್ ಆಚಾರ್ಯ ಬಾಯಾರು ನಿರ್ಮಿಸುತ್ತಿದ್ದು, ಈ ಬಾರಿಯ ವಿಗ್ರಹ ಸೇವೆಯನ್ನು ಧಾರ್ಮಿಕ, ಸಾಮಾಜಿಕ, ಮುಂದಾಳು, ಕೊಡುಗೈದಾನಿ ಕಿರಣ್ ಶೆಟ್ಟಿ ಉದ್ಯಾವರ ಮಾಡ ಮನೆಯವರು ಸಮರ್ಪಿಸುವರು. ಈ ಬಾರಿಯ ಮಂಜೇಶ್ವರ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14 ರಿಂದ ಮೊದಲ್ಗೊಂಡು ಸೆಪ್ಟೆಂಬರ್ 17 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries