HEALTH TIPS

ಆಂಥ್ರೋಪಿಕ್‌ನ ಫೇಬಲ್ 5, ಮಿಥೋಸ್ 5 ಎಐ ಮಾದರಿಗಳ ಮೇಲಿನ ಅಮೆರಿಕ ನಿರ್ಬಂಧ ರದ್ದು

 ಸ್ಯಾನ್ ಫ್ರಾನ್ಸಿಸ್ಕೊ: ತನ್ನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳಾದ 'ಕ್ಲಾಡ್ ಫೇಬಲ್ 5' ಮತ್ತು 'ಕ್ಲಾಡ್ ಮಿಥೋಸ್ 5' ಮೇಲಿನ ರಫ್ತು ನಿರ್ಬಂಧಗಳನ್ನು ಅಮೆರಿಕ ಸರ್ಕಾರ ತೆಗೆದು ಹಾಕಿದೆ ಎಂದು ಎಐ ಸಂಸ್ಥೆ ಆಂಥ್ರೋಪಿಕ್ ಮಂಗಳವಾರ ತಿಳಿಸಿದೆ. ಹೀಗಾಗಿ ಈ ಮಾದರಿಗಳನ್ನು ಶೀಘ್ರದಲ್ಲೇ ಜಾಗತಿಕವಾಗಿ ಮತ್ತೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.


ಟ್ರಂಪ್ ಆಡಳಿತವು ಇತ್ತೀಚೆಗೆ ರಾಷ್ಟ್ರೀಯ ಭದ್ರತೆ ಮತ್ತು ಸೈಬರ್ ಸುರಕ್ಷತೆಯ ಕಾರಣಗಳನ್ನು ಉಲ್ಲೇಖಿಸಿ, ಸುಧಾರಿತ ಎ.ಐ ಮಾದರಿಗಳ ಬಿಡುಗಡೆಯ ಮೇಲೆ ನಿರ್ಬಂಧ ಹೇರಿತ್ತು. ಈ ಮಾದರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಆಂಥ್ರೋಪಿಕ್‌ನ ಫೇಬಲ್ 5 ಮತ್ತು ಮಿಥೋಸ್ 5 ಮೇಲೂ ನಿಯಂತ್ರಣ ಹೇರಲಾಗಿತ್ತು.

'ಕ್ಲಾಡ್ ಫೇಬಲ್ 5 ಮತ್ತು ಮಿಥೋಸ್ 5 ಮೇಲಿನ ರಫ್ತು ನಿಯಂತ್ರಣಗಳನ್ನು ವಾಣಿಜ್ಯ ಇಲಾಖೆ ಹಿಂತೆಗೆದುಕೊಂಡಿದೆ. ಬುಧವಾರದಿಂದ ಈ ಮಾದರಿಗಳ ಲಭ್ಯತೆಯನ್ನು ಮರುಸ್ಥಾಪಿಸಲಾಗುತ್ತದೆ' ಎಂದು ಆಂಥ್ರೋಪಿಕ್ ಎಕ್ಸ್‌ನಲ್ಲಿ ಪ್ರಕಟಿಸಿದೆ.

ಜೂನ್ 12ರಂದು ಅಮೆರಿಕ ಸರ್ಕಾರವು ಈ ಎರಡೂ ಮಾದರಿಗಳ ಲಭ್ಯತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ ಬಳಿಕ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.

ವಿದೇಶಿ ನಾಗರಿಕರಿಗೆ ಆಂಥ್ರೋಪಿಕ್‌ನ ಮೀಥೋಸ್, ಫೇಬಲ್ ಬಳಕೆಗೆ ಅಮೆರಿಕ ನಿರ್ಬಂಧ

ಆಂಥ್ರೋಪಿಕ್‌ನಂತೆ, ಓಪನ್‌ಎಐ ಕೂಡ ತನ್ನ ಹೊಸ ಜಿಪಿಟಿ-5.6 ಮಾದರಿಯನ್ನು ಆರಂಭದಲ್ಲಿ ಅನುಮೋದಿತ ಪಾಲುದಾರರ ಸೀಮಿತ ಗುಂಪಿಗೆ ಮಾತ್ರ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.

ಈ ಮಧ್ಯೆ, ಮುಂದುವರಿದ ಎಐ ಮಾದರಿಗಳಲ್ಲಿರುವ ಸುರಕ್ಷತಾ ನ್ಯೂನತೆಗಳನ್ನು ಗುರುತಿಸಿ ಅವುಗಳಿಗೆ ಸ್ಪಂದಿಸಲು ಸಾಮಾನ್ಯ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಆಂಥ್ರೋಪಿಕ್ ಹೇಳಿದೆ. ಈ ಸಂಬಂಧ ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಸಹಕಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ.

'ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಶಕ್ತಿಶಾಲಿ ಎಐ ಮಾದರಿಗಳು ಬಿಡುಗಡೆಯಾಗಲಿರುವುದರಿಂದ, ಅವುಗಳ ಸುರಕ್ಷತೆಯನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಇನ್ನಷ್ಟು ಅಗತ್ಯವಾಗಲಿದೆ' ಎಂದು ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ಹೇಳಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries