HEALTH TIPS

ಶಾಂತಿ ಮಾತುಕತೆ ವೇಳೆ ಅರಾಗ್ಚಿ, ಖಾಲೀಬಾಫ್ ಹತ್ಯೆಗೆ ಇಸ್ರೇಲ್ ಸಂಚು: ಅಮೆರಿಕ ಶಂಕೆ

 ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ಇರಾನ್‌ನ ಪ್ರಮುಖ ಸಂಧಾನಕಾರರನ್ನು ಹತ್ಯೆ ಮಾಡುವ ಸಂಚನ್ನು ಇಸ್ರೇಲ್ ರೂಪಿಸಿರಬಹುದು ಎಂಬ ಆತಂಕ ಅಮೆರಿಕದ ಅಧಿಕಾರಿಗಳಲ್ಲಿ ಮೂಡಿತ್ತು ಎಂದು ಅಮೆರಿಕದ ಹಾಲಿ ಮತ್ತು ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ. 


ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್‌ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಅವರ ಜೀವಕ್ಕೆ ಅಪಾಯವಿದೆ ಎಂಬ ಆತಂಕ ಅಮೆರಿಕಕ್ಕೆ ಹೆಚ್ಚಾಗಿತ್ತು. ಏಪ್ರಿಲ್‌ನಲ್ಲಿ ಯುದ್ಧ ವಿರಾಮ ಹಾಗೂ ಮಧ್ಯಂತರ ಶಾಂತಿ ಒಪ್ಪಂದಕ್ಕಾಗಿ ನಡೆಯುತ್ತಿದ್ದ ಮಾತುಕತೆಗಳ ವೇಳೆ ಈ ಆತಂಕ ಮತ್ತಷ್ಟು ತೀವ್ರಗೊಂಡಿತ್ತು.

ಈ ಇಬ್ಬರು ನಾಯಕರನ್ನು ಹತ್ಯೆ ಮಾಡುವ ಪ್ರಯತ್ನ ನಡೆದಿದ್ದರೆ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗಿ, ಮತ್ತೆ ಯುದ್ಧ ತೀವ್ರವಾಗುವ ಸಾಧ್ಯತೆ ಇತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್ ಇವರಿಬ್ಬರನ್ನು ಹತ್ಯೆ ಮಾಡುವ ಸಾಧ್ಯತೆ ಇದೆ ಎಂದು ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮೂಲಕ ಇರಾನ್‌ಗೆ ಸಂದೇಶ ರವಾನಿಸುವ ಕೆಲಸವನ್ನೂ ಅಮೆರಿಕ ಮಾಡಿತ್ತು.

ಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳು

ಯುದ್ಧದ ಆರಂಭದಿಂದಲೇ ಇರಾನ್‌ನ ಉನ್ನತ ನಾಯಕರನ್ನು ಹತ್ಯೆ ಮಾಡುವುದೇ ಇಸ್ರೇಲ್‌ನ ಪ್ರಮುಖ ಕಾರ್ಯತಂತ್ರವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೆಬ್ರುವರಿ 28ರಂದು ನಡೆದ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಮೃತಪಟ್ಟಿದ್ದರು. ಈ ದಾಳಿಗೆ ಅಗತ್ಯವಾದ ಗುಪ್ತಚರ ಮಾಹಿತಿಯನ್ನು ಅಮೆರಿಕ ಒದಗಿಸಿತ್ತು.

ಅಮೆರಿಕದ ದಾಳಿಗಳು ಮುಖ್ಯವಾಗಿ ಇರಾನ್‌ನ ನೌಕಾಪಡೆ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದ್ದರೆ, ಇಸ್ರೇಲ್ ಆರಂಭಿಕ ಹಂತದಲ್ಲೇ ರಾಜಕೀಯ ಮತ್ತು ಸೇನಾ ನಾಯಕತ್ವವನ್ನು ಹತ್ಯೆ ಮಾಡುವತ್ತ ಹೆಚ್ಚು ಗಮನಹರಿಸಿತ್ತು. ಅಮೆರಿಕ ಮಾತುಕತೆ ನಡೆಸಲು ಬಯಸಿದ್ದ ನಾಯಕರೂ ಇಸ್ರೇಲ್‌ನ ಗುರಿಯಾಗಿದ್ದರೆಂಬ ಆತಂಕವೂ ಅಧಿಕಾರಿಗಳಲ್ಲಿ ಇತ್ತು.

ಈ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ನಿರಾಕರಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries