HEALTH TIPS

ವನತಾರಕ್ಕೆ 80 ನೀರಾನೆ: ಸಾವಿನಂಚಿನಲ್ಲಿದ್ದ ಪ್ರಾಣಿಗಳಿಗೆ ಅನಂತ್ ಆಶ್ರಯ

ಕಾಡುಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಗುಜರಾತ್‌ನಲ್ಲಿ ಅನಂತ್ ಅಂಬಾನಿ ನಡೆಸುತ್ತಿರುವ ಖಾಸಗಿ ಅಭಯಾರಣ್ಯ ವನತಾರವು ಮಾದಕ ವಸ್ತುಗಳ ದೊರೆ ಪ್ಯಾಬ್ಲೊ ಎಸ್ಕೊಬಾರ್ ಸಾವಿನ ಬಳಿಕ ಅನಾಥವಾಗಿದ್ದ ಕೊಲಂಬಿಯಾದ ನೀರಾನೆಗಳ ನೆರವಿಗೆ ಧಾವಿಸಿದೆ.

ಹೌದು, 80 ನೀರಾನೆಗಳನ್ನು ಭಾರತಕ್ಕೆ ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ಸ್ಥಳಾಂತರ ಕೋರಿ ಕೊಲಂಬಿಯಾ ಸರ್ಕಾರಕ್ಕೆ ವನತಾರ ಆಡಳಿತ ಮಂಡಳಿ ಪತ್ರ ಬರೆದಿದೆ.

'ಈ ನೀರಾನೆಗಳು ನಾವು ಎಲ್ಲಿ ಹುಟ್ಟಬೇಕೆಂದು ನಿರ್ಧರಿಸಿಕೊಂಡು ಹುಟ್ಟಿಲ್ಲ. ಅಥವಾ ಈಗ ಅವುಗಳು ಅನುಭವಿಸುತ್ತಿರುವ ಸ್ಥಿತಿಯನ್ನೂ ಅವುಗಳು ಸೃಷ್ಟಿಸಿಕೊಂಡಿಲ್ಲ. ಅವು ಸಂವೇದನಾಶೀಲ ಜೀವಿಗಳು. ಸುರಕ್ಷಿತ ಮತ್ತು ಪರ್ಯಾಯ ಮಾರ್ಗದ ಮೂಲಕ ಅವುಗಳನ್ನು ಉಳಿಸುವ ಸಾಮರ್ಥ್ಯ ನಮಗಿದ್ದರೆ, ಪ್ರಯತ್ನಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ'ಎಂದು ಅನಂತ್ ಹೇಳಿದ್ದಾರೆ

ಬೃಹತ್ ಗಾತ್ರದ ಕಾಡುಪ್ರಾಣಿಗಳ ಕಾಳಜಿ ಮತ್ತು ನಿರ್ವಹಣೆಗೆ ವನತಾರಕ್ಕೆ ಅಗತ್ಯ ಸಾಂಸ್ಥಿಕ ಅನುಭವವಿದೆ. ಅಗತ್ಯ ಚಿಕಿತ್ಸೆ, ಮೂಲಸೌಕರ್ಯ, ಪಶುಸಂಗೋಪನೆ ವ್ಯವಸ್ಥೆ ಮತ್ತು ಪ್ರಾಣಿಗಳ ಸುರಕ್ಷತಾ ಶಿಷ್ಟಾಚಾರಗಳನ್ನು ಒಳಗೊಂಡಿದೆ ಎಂದಿದ್ದಾರೆ.

1993ರಲ್ಲಿ ಎಸ್ಕೋಬಾರ್ ನೀರಾನೆ ಸೇರಿದಂತೆ ವಿಲಕ್ಷಣ ಪ್ರಾಣಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿದ್ದಾಗ ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ಡಲ್ಲಾಸ್‌ನ ಮೃಗಾಲಯದಿಂದ ಆತ ಅವುಗಳ ಕಳ್ಳಸಾಗಣೆ ಮಾಡಿದ್ದನು. ಲ್ಯಾಟಿನ್ ಅಮೆರಿಕದ ಅತಿದೊಡ್ಡ ಖಾಸಗಿ ಮೃಗಾಲಯವನ್ನು ನಿರ್ಮಿಸಲು ಆತ ಬಯಸಿದ್ದನು.

ಕೊಲಂಬಿಯಾ ಸರ್ಕಾರವು ವೇಗವಾಗಿ ಬೆಳೆಯುತ್ತಿರುವ ನೀರಾನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಹೆಣಗಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರವು ಡಜನ್‌ಗಟ್ಟಲೆ ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ಅನುಮೋದಿಸಿತ್ತು, ಕ್ರಮದ ನಂತರ, ಅನಂತ್ ಅಂಬಾನಿ ಕೊಲಂಬಿಯಾದ ಅಧಿಕಾರಿಗಳಿಗೆ ಪತ್ರ ಬರೆದು ಕೊಲ್ಲದಂತೆ ಒತ್ತಾಯಿಸಿದ್ದರು. ಅಲ್ಲದೇ, ವನತಾರಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದ್ದರು.

ಒಂದುವೇಳೆ, ಎಲ್ಲವುಗಳನ್ನು ಸ್ಥಳಾಂತರಿಸುವುದು ಕಷ್ಟ ಎಂದಾದರೆ, ಕೆಲವನ್ನು ಮಾತ್ರ ಇಲ್ಲಿಗೆ ಕಳುಹಿಸಿ ಮತ್ತೆ ಕೆಲವಕ್ಕೆ ಕೊಲಂಬಿಯಾದಲ್ಲೇ ಅಭಯಾರಣ್ಯ ಸ್ಥಾಪಿಸುವ ಭರವಸೆ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries