HEALTH TIPS

ಆವರಣಗೋಡೆ ಕುಸಿದು ಬಿದ್ದು ಮೂರು ಕಾರುಗಳಿಗೆ ಹಾನಿ

ಕಾಸರಗೋಡು: ಬಿರುಸಿನ ಮಳೆಗೆ ಚೆರ್ಕಳದಲ್ಲಿ ಗೋಡೆ ಕುಸಿದು ಬಿದ್ದು ಮೂರು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.  

ಚೆರ್ಕಳ ಇಂದಿರಾನಗರದ ಖಾಸಗಿ ಆಸ್ಪತ್ರೆಯೊಂದರ ರಸ್ತೆ ಬದಿಯ ಗೋಡೆ ಕುಸಿದು ದುರಂತ ಸಂಭವಿಸಿದೆ. ಈ ಸಂದರ್ಭ ಗೋಡೆ ಅಂಚಿಗೆ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಏಕಾಏಕಿ ಗೋಡೆ ಕುಸಿದು ಬಿದ್ದಿದೆ.   ಈ ಪ್ರದೇಶದ ಮನೆಯೊಂದರಲ್ಲಿ ಆಯೋಜಿಸಲಾಗಿದ್ದ ಮದುವೆ ಸತ್ಕಾರ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದವರು  ಆಸ್ಪತ್ರೆಯ ಗೋಡೆ ಬಳಿ ತಮ್ಮ ಕಾರುಗಳನ್ನು ಪಾರ್ಕ್ ಮಾಡಿದ್ದರು.  ಆ ವೇಳೆ ಸುರಿದ ಭಾರೀ ಮಳೆಗೆ ರಸ್ತೆ ಬದಿಯ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭ ಆಸುಪಾಸು ಹಾಗೂ ಕಾರುಗಳಲ್ಲಿ ಯಾರೂ ಇಲ್ಲದಿದ್ದ ಹಿನ್ನೆಲೆಯಲ್ಲಿ ಜೀವಾಪಾಯ ತಪ್ಪಿದೆ.  ವಿದ್ಯಾನಗರ ಠಾಣೆ ಪೆÇಲೀಸರು ಮತ್ತು ಕಾಸರಗೋಡು ಅಗ್ನಿಶಾಮಕದಳ ಘಟನೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries