ಕಾಸರಗೋಡು: ಉಡುಪಿಯಿಂದ ರೆಡಿ-ಮಿಕ್ಸ್ ಕಾಂಕ್ರೀಟ್ ಸಾಗಿಸುತ್ತಿದ್ದ 22 ಚಕ್ರಗಳ ಲಾರಿ ಚೆರ್ಕಳ ಸನಿಹದ ಬೇವಿಂಜೆ ತಿರುವಿನಲ್ಲಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಈ ಸಂದರ್ಭ ಚಾಲಕ ಲಾರಿಯೊಳಗೆ ಸಿಲುಕಿಕೊಂಡಿದ್ದು, ಹೈಡ್ರಾಲಿಕ್ ಕಟ್ಟರ್ ಬಳಸಿ ವಾಹನದ ಭಾಗಗಳನ್ನು ಕತ್ತರಿಸುವ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಗಾಯಾಳು ಚಾಲಕನನ್ನುಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಪ್ರಸೀದ್ ಮತ್ತು ತಂಡ ದೀರ್ಘಕಾಲ ಸಾಹಸಮಯ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.


