ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್ ಸ್ವಯಂ ಸೇವಕರು ಆರೋಗ್ಯ ಇಲಾಖೆ ಮತ್ತು ಬದಿಯಡ್ಕ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಬೇಳ ದರ್ಬೆತಡ್ಕದಲ್ಲಿ ಪ್ಯಾಲಿಯೇಟಿವ್ ರೋಗಿಯ ಮನೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ.ಡಿ, ಆರೋಗ್ಯ ಇಲಾಖೆಯ ರಾಜೇಶ್, ಜಿಂಟೊ, ಆಶಾ ಕಾರ್ಯಕರ್ತೆ ಶಾಲಿನಿ ಹಾಗೂ ಅಧ್ಯಾಪಕರು ಸ್ವಯಂಸೇವಕರೊಂದಿಗೆ ಭಾಗವಹಿಸಿದರು.

.jpg)
