ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನದಲ್ಲಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಮನೆ ಮೇಲೆ ಆಕ್ರೋಶಿತ ತಂಡವೊಂದು ದಾಳಿ ನಡೆಸಿದೆ. ಪೆÇೀಕ್ಸೋ ಪ್ರಕರಣದ ಆರೋಪಿ ಅಬೂಬಕ್ಕರ್ ಎಂಬಾತನ ಪಡನ್ನ ಗಣೇಶ್‍ಮುಕ್ಕಿನಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ತಂಡ ನಡೆಸಿದ ದಾಳಿಯಿಂದ ಮನೆಯ ಕಿಟಕಿ ಹಾನಿಗೀಡಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಚಂದೇರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಂಡ ಕಿಟಕಿ ಗ್ಲಾಸ್‍ಗಳನ್ನು ಒಡೆದು ಹಾನಿಗೊಳಿಸಿದ್ದು, ಮನೆಯಲ್ಲಿದ್ದ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ್ ಮತ್ತು ವಿಜಯ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 14ರ ಹರೆಯದ ಬಾಲಕಿಯನ್ನು ತಿನಿಸು ಕೊಡುವ ಭರವಸೆಯೊಂದಿಗೆ ಮನೆಗೆ ಕರೆಸಿಕೊಂಡಿದ್ದ ಪಡನ್ನ ಗಣೇಶ್‍ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್(70) ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು

